ಪೆರಾಜೆ: ಕಾಡಾನೆಯೊಂದು ಬಾವಿಗೆ ಬಿದ್ದ ಘಟನೆ ಪೆರಾಜೆ ಸಮೀಪ ಕಲ್ಚರ್ಪೆಯಲ್ಲಿ ನಡೆದಿದೆ.ಅರಣ್ಯದಂಚಿನ ತೋಟದಲ್ಲಿರುವ ಪಾಳು ಬಿದ್ದ ಬಾವಿಗೆ ಕಾಡಾನೆ ಕಳೆದ ರಾತ್ರಿ ಬಿದ್ದಿದೆ. ಕಾಡಿನಿಂದ ನಾಡಿಗೆ ಬಂದ ಆನೆಯು ಆಯ ತಪ್ಪಿ ಬಾವಿಗೆ ಬಿದ್ದಿದೆ. ಇದೀಗ ಅರಣ್ಯ ಇಲಾಖೆಯ

ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆನೆಯ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಬಾವಿಯ ಒಂದು ಬದಿಯಿಂದ ಜೆಸಿಬಿ ಬಳಸಿ ಆಳ ಮಾಡಿ ಆನೆಯನ್ನು ಮೇಲಕ್ಕೆ ತರುವ ಪ್ರಯತ್ನ ನಡೆಸಲಾಗುತಿದೆ. ಸುಳ್ಯ ಎಸಿಎಫ್ ಪ್ರಶಾಂತ್ ಕುಮಾರ್ ಪೈ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ.ಮತ್ತಿತರರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.















