ಕಲ್ಲಪಳ್ಲಿ:ಗಡಿ ಪ್ರದೇಶವಾದ ಕಲ್ಲಪ್ಪಳ್ಳಿ ಪ್ರದೇಶದಲ್ಲಿ ವನ್ಯ ಪ್ರಾಣಿಗಳ ಉಪಟಳ ಮಿತಿ ಮೀರಿದ್ದು ಇದರ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೃಷಿಕರ ಸಂಘದ ನೇತೃತ್ವದಲ್ಲಿ ಪಾಣತ್ತೂರು ಅರಣ್ಯ ಇಲಾಖೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಆನೆ ಮತ್ತಿತರ ವನ್ಯ ಪ್ರಾಣಿಗಳು ಕೃಷಿಗೆ ಹಾನಿ ಮಾಡುವುದರ ಜೊತೆಗೆ
ಚಿರತೆ, ಹುಲಿಗಳು ಮನೆಯ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತುದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅಧ್ಯಕ್ಷತೆ ವಹಿಸಿದ್ದ ಪಾಣತ್ತೂರು ಕೃಷಿಕರ ಸಂಘದ ಅಧ್ಯಕ್ಷ ಅರುಣ್ ರಂಗತ್ತಮಲೆ ಮಾತನಾಡಿ ಚಿರತೆಯನ್ನು ಹಿಡಿದು ಅಭಯಾರಣ್ಯಕ್ಕೆ ಸಾಗಿಸುವಂತೆ ಒತ್ತಾಯಿಸಿದರು. ಕೃಷಿಕರ ಸಂಘದ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಜನಾರ್ದನನ್ ಉದ್ಘಾಟಿಸಿದರು. ಪನತ್ತಡಿ ಏರಿಯಾ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ಪನತ್ತಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುರಿಯಾಕೋಸ್, ಮತ್ತು ಪಾಣತೂರು ಸಿಪಿಎಂ ಲೋಕಲ್ ಸೆಕ್ರೆಟರಿ ಬಿನು ವರ್ಗೀಸ್ ಮಾತನಾಡಿದರು. ಬೇಡಿಕೆಯನ್ನು ಈಡೇರಿಸುವಂತೆ ಇಲಾಖೆಗೆ ಮನವಿ ಸಲ್ಲಿಸಲಾಯಿತು.





