ಕೋಲ್ಕತಾ: ವಿಶ್ವಕಪ್ ಫೈನಲ್ನಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು ಎಸುರಿಸಲಿದೆ. ನ.19ರಂದು ಅಹಮ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ನಡೆಯಲಿದೆ. ಇಂದು ನಡೆದ ಎರಡನೇ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 3 ವಿಕೆಟ್ಗೆ ಮಣಿಸಿ ಆಸ್ಟ್ರೇಲಿಯಾ ಎಂಟನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿತು.
ಈಡೆನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 213 ರನ್ ಗುರಿ ಬೆನ್ನಟ್ಟಿದ
ಆಸ್ಟ್ರೇಲಿಯ 47.2 ಓವರ್ಗಳಲ್ಲಿ 7 ವಿಕೆಟ್ ರಷ್ಟಕ್ಕೆ 213 ರನ್ ಬಾರಿಸಿ ಗುರಿ ಮುಟ್ಟಿತು. ಆಸೀಸ್ ಪರ ಓಪನರ್ ಟ್ರಾವಿಸ್ ಹೆಡ್ 9 ಬೌಂಡರಿ 2 ಸಿಕ್ಸರ್ ಸಹಿತ 62 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಡೇವಿಡ್ ವಾರ್ನರ್ 29 ರನ್, ಸ್ಟೀವನ್ ಸ್ಮಿತ್ 30 ರನ್ ಗಳಿಸಿದರೆ, ಜೋಸ್ ಇಲ್ಲಿಂಗ್ಸ್ 28 ರನ್ ಪೇರಿಸಿದರು. ಮಿಚೆಲ್ ಸ್ಟಾರ್ಕ್ 16 ಹಾಗೂ ಪ್ಯಾಟ್ ಕಮ್ಮಿನ್ಸ್ 14 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿದರು.ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಹಾಗೂ ಶಂಸಿ ತಲಾ 2 ವಿಕೆಟ್ ಪಡೆದುಕೊಂಡರು. ರಬಾಡ ,ಐಡಮ್ ಮಾರ್ಕ್ರಮ್ ಹಾಗೂ ಕೇಶವ್ ಮಹಾರಾಜ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 49.4 ಓವರ್ಗಳಲ್ಲಿ 212 ರನ್ಗಳಿಗೆ ಆಲ್ ಔಟ್ ಆಯುತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ
ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ಬೌಲರ್ಗಳ ದಾಳಿಗೆ ಕುಸಿಯಿತು. 24 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆಫ್ರಿಕಾಕ್ಕೆ ಡೇವಿಡ್ ಮಿಲ್ಲರ್ ಏಕಾಂಗಿ ಹೋರಾಟದ ಮೂಲಕ ಬಲ ತುಂಬಿದರು. ಅಮೋಘ ಶತಕ ಸಿಡಿಸಿದ ಮಿಲ್ಲರ್ 116 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 101 ರನ್ ಗಳಿಸಿದರು. ಹೆನ್ರಿಚ್ ಕ್ಲಾಸೆನ್ 48 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 47 ರನ್ ಬಾರಿಸಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ತಲಾ 3 ವಿಕೆಟ್, ಹಝಲ್ವುಡ್ ಮತ್ತು ಟ್ರಾವಿಸ್ಹೆಡ್ ತಲಾ ಎರಡು ವಿಕೆಟ್ ಪಡೆದರು.









