ಧರ್ಮಶಾಲಾ: ವಿಶ್ವಕಪ್ ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದ್ದು, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸುಲಭ ಜಯಗಳಿಸಿದ ದಕ್ಷಿಣ ಆಫ್ರಿಕಾ ಎರಡನೇ ಪಂದ್ಯದಲ್ಲಿ ಐದು ಬಾರಿಯ
ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವಿಭಾಗ ಈ ವಿಶ್ವಕಪ್ನಲ್ಲಿ ಮಿಂಚುತಿದೆ. ಕ್ವಿಂಟನ್ ಡಿ ಕಾಕ್, ರಸಿ ವ್ಯಾನ್ಡೆರಸ್, ಏಡನ್ ಮರ್ಕರಂ ಅವರು ಮೊದಲ ಪಂದ್ಯದಲ್ಲೇ ಶತಕ ಹೊಡೆದಿದ್ದರು. ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಕೂಡ ಮಿಂಚಿನ ಇನಿಂಗ್ಸ್ ಆಡಬಲ್ಲವರು.
ನೆದರ್ಲೆಂಡ್ಸ್ ತಂಡ ಸವಾಲೆಸೆಯುವ ಆಟ ಪ್ರದರ್ಶಿಸುವ ಹುಮ್ಮಸ್ಸಿನಲ್ಲಿದೆ. ಅಚ್ಚರಿಯ ಫಲಿತಾಂಶಕ್ಕೆ ಯತ್ನಿಸುವುದಂತೂ ಖಚಿತ.
ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ತಂಡಗಳು ಇದುವರೆಗೆ ಏಳು ಬಾರಿ ಮುಖಾಮುಖಿಯಾಗಿವೆ. ಆರು ಬಾರಿ ದಕ್ಷಿಣ ಆಫ್ರಿಕ ಜಯಗಳಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿತ್ತು.