ಸುಳ್ಯ: ಸುಳ್ಯ ಪ್ರೆಸ್ ಕ್ಲಬ್ ಬಳಿಯಲ್ಲಿ ಕಸ ಎಸೆದವರಿಗೆ ನಗರ ಪಂಚಾಯತ್ ವತಿಯಿಂದ 5 ಸಾವಿರ ರೂ ದಂಡ ವಿಧಿಸಲಾಗಿದೆ. ಸುಳ್ಯ ಅಂಬೆಟಡ್ಕದ ಪ್ರೆಸ್ ಕ್ಲಬ್, ಕನ್ನಡ ಭವನ ದೇವಸ್ಥಾನ ಹಾಗೂ ಜನವಸತಿ ಇರುವ ಪ್ರದೇಶದ ಬಳಿಯಲ್ಲಿ ರಾಶಿ ಕಸವನ್ನು ಸುರಿಯಲಾಗಿತ್ತು. ಜನ ನಿಬಿಡ ಪ್ರದೇಶದಲ್ಲಿ
ಕಸದ ರಾಶಿ ಹಾಕಿರುವುದು ನಗರ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ಬಂದು ಕಸವನ್ನು ಪರಿಶೀಲನೆ ನಡೆಸಿದಾಗ ಕಸ ಹಾಕಿದ ಅಂಗಡಿಯವರನ್ನು ಪತ್ತೆ ಮಾಡಿ ದಂಡ ವಿಧಿಸಲಾಯಿತು ಎಂದು ತಿಳಿದು ಬಂದಿದೆ. ಈ ಹಿಂದೆ ಈ ಭಾಗದಲ್ಲಿ ರಾಶಿ ಕಸ ಸುರಿಯಲಾಗುತ್ತಿತ್ತು. ನಗರ ಪಂಚಾಯತ್ ವತಿಯಿಂದ ಕ್ರಮ ಕೈಗೊಳ್ಳಲು ಆರಂಭಿಸಿದ ಬಳಿಕ ಈ ಪ್ರದೇಶ ಸ್ವಚ್ಛವಾಗಿತ್ತು. ಇದೀಗ ಇಲ್ಲಿ ರಾಶಿ ಕಸ ಸುರಿದಿರುವುದು ಕಂಡು ಬಂದಿತ್ತು.