ಸುಳ್ಯ: ಸುಳ್ಯ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಇದ್ದರೂ ವೋಲ್ಟೇಜ್ ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸುಳ್ಯ ನಗರದ ಹಳೆಗೇಟು, ಜಯನಗರ ಮತ್ತಿತರ ಕೆಲವು ಭಾಗಗಳಲ್ಲಿ ಈ ರೀತಿಯ ಸಮಸ್ಯೆ ಉಂಟಾಗಿರುವ ಬಗ್ಗೆ ಜನರು ದೂರಿದ್ದಾರೆ. ಜಂಪರ್ ಕಟ್ ಆದ ಕಾರಣ ಕೆಲವು
ಕಡೆಗಳಲ್ಲಿ ವೋಲ್ಟೇಜ್ ಸಮಸ್ಯೆ ತಲೆದೋರಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಸಂಜೆ ಮಳೆ ಬಂದ ಬಳಿಕ ಹಲವು ಹೊತ್ತು ವಿದ್ಯುತ್ ಕಡಿತಗೊಂಡಿತ್ತು. ಬಳಿಕ ಬಂದರೂ ವೋಲ್ಟೇಜ್ ಇಲ್ಲದೆ ಲೈಟ್ ಡಿಮ್ ಆಗಿದೆ, ಫ್ಯಾನ್ ತಿರುಗುತ್ತಿಲ್ಲ, ಯಾವುದೇ ಉಪಕರಣಗಳು ವರ್ಕ್ ಆಗದ ಸ್ಥಿತಿ ಇದೆ ಎಂದು ಜನರು ಹೇಳುತ್ತಾರೆ. ತಾಲೂಕಿನ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತ ಆಗಿರುವ ಬಗ್ಗೆ ವರದಿಗಳಿವೆ.





