ಸುಳ್ಯ: ತಾಲೂಕು ವಾಲಿಬಾಲ್ ಅಸೋಸಿಯೇಷನ್ನ ವಾರ್ಷಿಕ ಮಹಾಸಭೆ ತಾಲೂಕು ವಾಲಿಬಾಲ್ ಅಸೋಸಿಯೇಷನ್ನ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅವರ ಅಧ್ಯಕ್ಷತೆಯಲ್ಲಿ ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಅಸೋಸಿಯೇಶನ್ ಕಾರ್ಯದರ್ಶಿ ಜಯಪ್ರಕಾಶ್ ವರದಿ ವಾಚಿಸಿದರು. ಕೋಶಾಧಿಕಾರಿ ಕೆ.ಬಿ.ಇಬ್ರಾಹಿಂ ಲೆಕ್ಕಪತ್ರ ಮಂಡಿಸಿದರು.ವಾಲಿಬಾಲ್ ಅಸೋಸಿಯೇಶನ್ ಜಿಲ್ಲಾ
ಉಪಾಧ್ಯಕ್ಷ ಎಸ್ ಸಂಶುದ್ದೀನ್, ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಹೆಗ್ಡೆ, ವಾಲಿಬಾಲ್ ಅಸೋಸಿಯೇಶನ್ ರಾಜ್ಯ ಅಸೋಸಿಯೇಟ್ ಕಾರ್ಯದರ್ಶಿ ಎನ್. ಜಯಪ್ರಕಾಶ್ ರೈ ಮೊದಲಾದವರು ಉಪಸ್ಥಿತರಿದ್ದರು. ಬಾಲಗೋಪಾಲ ಸೆರ್ಕಜೆ, ಹರಿಪ್ರಕಾಶ್ ಅಡ್ಕಾರ್, ಶರತ್ ಅಡ್ಕಾರ್, ಮೂಸಾ ಕುಂಞಿ ಪೈಂಬಚ್ಚಾಲ್, ಕೆ ಎಂ ಮುಸ್ತಫಾ, ಶಾಫಿ ಕುತ್ತಮೊಟ್ಟೆ, ಕೆ.ಟಿ. ಭಾಗೀಶ, ರಾಜುಪಂಡಿತ್, ಮಂಜುನಾಥ್, ವೀರನಾಥ್, ಅಶ್ರಫ್ ಗುಂಡಿ, ಉಮೇಶ್ ಪಂಜದಬೈಲ್, ಲಿತೀನ್, ಎ.ಸಿವಸಂತ,ಭವಾನಿಶಂಕರ್ ಕಲ್ಮಡ್ಕ,ಇರ್ಪಾನ್ ಜನತಾ, ಖಾಲಿದ್ ಬೀಜಕೊಚ್ಚಿ, ರಜಾಕ್ (ರಜ್ಜುಭಯ್ಯಾ), ಶಶಿಧರ ಎಂ ಜೆ, ಶಹೀದ್, ವಿಶ್ವನಾಥ, ಚೇತನ್ ಕಜೆಗದ್ದೆ, ಶರೀಫ್ ಜಟ್ಟಿಪಳ್ಳ, ಬಶೀರ್ ಸಪ್ನಾ ಮೊದಲಾದವರು ಉಪಸ್ಥಿತರಿದ್ದರು.