ಮಂಗಳೂರು:ವಿಜಯ ಕರ್ನಾಟಕ ದಿನ ಪತ್ರಿಕೆ ಹಾಗೂ ನೀರುಮಾರ್ಗ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸಲು 7 ನೇ ವರ್ಷದ ವಿಕ ಸೂಪರ್ಸ್ಟಾರ್ ರೈತ ಪುರಸ್ಕಾರ – 2024-25 ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದ ಸಮಗ್ರ ಕೃಷಿಕ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಮತ್ತು ಸುಳ್ಯದ ಇಂಡಿಯನ್ ಟೈಲ್ಸ್ ಉದ್ಯಮಿ ಪ್ರಗತಿಪರ ಹೈನುಗಾರ ಮಹಮ್ಮದ್ ಆಶ್ರಪ್ ಪರಪ್ಪೆ ಅವರಿಗೆ ನೀಡಿ ಪುರಸ್ಕರಿಸಲಾಯಿತು.ನೀರುಮಾರ್ಗ ಸೇವಾ ಸಹಕಾರಿ ಸಂಘದ
ಅಮೃತಸೌಧ ಸಭಾಭವನ ದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಶಾಸಕ ಡಾ. ವೈ. ಭರತ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ಮುಲೈ ಮಹಿಲನ್ ಪ್ರಧಾನ ಮಾಡಿದರು.ಮಾಜಿ ಮೇಯರ್ ಭಾಸ್ಕರ್ .ಕೆ ಉದ್ಘಾಟಿಸಿದರು. ಸಹಕಾರಿ ಸಂಘ ಅಧ್ಯಕ್ಷೆ ಸೆಲಿನ್ ಡಿಮೆಲ್ಲೋ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನೀರುಮಾರ್ಗ ಗ್ರಾಪಂ

ಕೃಷ್ಣನ್ ನಾಯರ್ ಕುತ್ತಮೊಟ್ಟೆ

ಅಶ್ರಪ್ ಪರಪ್ಪೆ
ಅಧ್ಯಕ್ಷ ಶ್ರೀಧರ್ ಕೆ., ಎಸಿಪಿ ಧನ್ಯಾ ನಾಯಕ್, ತಿರುವೈಲುಗುತ್ತು ಕಂಬಳ ಸಮಿತಿ ಸ್ಥಾಪಕ ನವೀನ್ ಆಳ್ವ ತಿರುವೈಲು ಗುತ್ತು, ಜಿಪಂ ನಾಮ ನಿರ್ದೇಶಿತ ಸದಸ್ಯ ಮೆಲ್ವಿನ್ ಡಿಸೋಜ, ., ಪ್ರಗತಿಪರ ಕೃಷಿಕ ಪದ್ಮನಾಭ ಕೋಟ್ಯಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಸುಜಾತ, ನೀರು ಮಾರ್ಗ ಸೇವಾ ಸಹಕಾರಿ ಸಂಘದ ಸಿಇಒ ಬೆನೆಡಿಕ್ಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

ಕೃಷ್ಣನ್ ನಾಯರ್ ಹಾಗೂ ಅಶ್ರಪ್ ಪರಪ್ಪೆ ಅವರ ಕೃಷಿ ಸಾಧನೆಯ ಬಗ್ಗೆ ‘ದಿ ಸುಳ್ಯ ಮಿರರ್’ ಡಿಜಿಟಲ್ ಮೀಡಿಯಾ ವಿಶೇಷ ವರದಿ ಪ್ರಕಟಿಸಿತ್ತು.
ಕೃಷ್ಣನ್ ನಾಯರ್ ಅವರ ಬಗ್ಗೆ 2024 ಅಕ್ಟೋಬರ್ 8 ರಂದು
“ಮಿಶ್ರ ಕೃಷಿಯ ಆಗರ.. ಕೃಷಿ ವೈವಿಧ್ಯತೆಯ ಕಣಜ..! ಮನ ಸೆಳೆಯುತಿದೆ ಕುತ್ತಮೊಟ್ಟೆಯ ಕೃಷ್ಣನ್ ನಾಯರ್ ಅವರ ಸುಂದರ ತೋಟ.!” ಎಂಬ ವಿಶೇಷ ವರದಿ ಪ್ರಕಟಿಸಿ ಅವರ ಕೃಷಿ ಸಾಧನೆಯ ಬಗ್ಗೆ ಬೆಳಕು ಚೆಲ್ಲಿತ್ತು.

ಅಶ್ರಪ್ ಅವರ ಬಗ್ಗೆ
“ದಿನಕ್ಕೆ 650 ಲೀಟರ್ ಹಾಲು.. ಫಾಂನಲ್ಲಿ 100ಕ್ಕೂ ಹೆಚ್ಚು ಹಸುಗಳು..: ಸುಳ್ಯದ ಉದ್ಯಮಿಯ ಗೋವು ಪ್ರೀತಿಗೆ ಉಕ್ಕಿದ ಕ್ಷೀರ ಸಂಪತ್ತು..”
ಎಂಬ ವಿಶೇಷ ವರದಿ 2023 ಫೆ.17ರಂದು ವಿಶೇಷ ವರದಿ ಪ್ರಕಟಿಸಿತ್ತು.
ಕೃಷ್ಣನ್ ನಾಯರ್ ಹಾಗೂ ಅಶ್ರಪ್ ಅವರ ಕುರಿತ ವಿಶೇಷ ವರದಿಯ ಲಿಂಕ್ ಕೆಳಗಿದೆ.