ಸುಳ್ಯ: ಸಂಗೀತ ಗುರು ವಿದ್ವಾನ್ ಕಾಂಚನ ಎ.ಈಶ್ವರ ಭಟ್ ನೇತೃತ್ವದ ಸುನಾದ ಸಂಗೀತ ಶಾಲೆಯ ಸುಳ್ಯ ಶಾಖೆಯ ವತಿಯಿಂದ ಸುನಾದ ಸಂಗೀತೋತ್ಸವ ಜ.28ರಂದು ಯುವಜನ ಸಂಯುಕ್ತ ಮಂಡಳಿಯ ರಂಗ ಮಂದಿರದಲ್ಲಿ ನಡೆಯಿತು.ದಿನ ಪೂರ್ತಿ ನಡೆದ ಸಂಗೀತೋತ್ಸವದ ಪ್ರಮುಖ ಅಂಗವಾಗಿ ಸಂಜೆ ಖ್ಯಾತ ಸಂಗೀತಗಾರರಾದ ವಿದ್ವಾನ್ ವಿಷ್ಣುದೇವ ನಂಬೂದಿರಿ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ
ಸಂಗೀತ ಕಛೇರಿ ನಡೆಯಿತು. ಜನಪ್ರಿಯ ಕೀರ್ತನೆಗಳನ್ನು ಪ್ತಸ್ತುತಪಡಿಸಿದ ವಿಷ್ಣುದೇವ ನಂಬೂದಿರಿ ಅವರ ಹಾಡುಗಾರಿಕೆ ಸಂಗೀತಾಸಕ್ತರ ಮನಸೂರೆಗೊಂಡಿತು. ವಯಲಿನ್ನಲ್ಲಿ ಎಡಪ್ಪಳ್ಳಿ ಅಜಿತ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ.ಈಶ್ವರ ಭಟ್ ಮೋರ್ಸಿಂಗ್ನಲ್ಲಿ ವಿದ್ವಾನ್ ಪಯ್ಯನ್ನೂರ್ ಗೋವಿಂದ ಪ್ರಸಾದ್ ಸಹಕರಿಸಿದರು. ಡಾ.ನವ್ಯ ಸ್ವಾಗತಿಸಿ, ಸುನಿಲ್ಕುಮಾರ್ ವಂದಿಸಿದರು.
ಬೆಳಿಗ್ಗೆ ದೀಪೋಜ್ವಲನದ ಮೂಲಕ ಆರಂಭಗೊಂಡ ಸಂಗೀತೋತ್ಸವನ್ನು ಗುರು ವಿದ್ವಾನ್ ಕಾಂಚನ ಎ.ಈಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಗುರು ವಂದನೆ ನಡೆಯಿತು. ವಿಜಯಶ್ರೀ, ವಾಣಿ ಪ್ರಸಾದ್, ಸೌಜನ್ಯ ಪ್ರಶಾಂತ್, ಮಹಾಬಲೇಶ್ವರ, ರವಿರಾಜ್, ಶಿಲ್ಪಾ ಸಿ.ಎಚ್. ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಸುನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.