ಸುಳ್ಯ:ಸುಳ್ಯ ನಗರದಲ್ಲಿ ಸಮಸ್ಯೆಗಳಿವೆ ಎಂದು ನಗರ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಯಾರ ವಿರುದ್ಧ. ಅವರದ್ದೇ ಕಾಂಗ್ರೆಸ್ ಸರಕಾರದ ವಿರುದ್ಧವೇ ಅಥವಾ ಸರಕಾರದ ಭಾಗವಾದ ಅಧಿಕಾರಿಗಳ ವಿರುದ್ಧವೇ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಪ್ರಶ್ನಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಬಿಜೆಪಿ ಆಡಳಿತ ಮಂಡಳಿ ಅಧಿಕಾರದಲ್ಲಿ ಇದ್ದಾಗ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಿದೆ. ಇದೀಗ ಅಧಿಕಾರಿಗಳ ಆಡಳಿತ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದಾಗಿ ಸುಳ್ಯದ ಕಸದ ಸಮಸ್ಯೆ ಮತ್ತೆ ಉಲ್ಬಣಿಸಿದೆ. ಅಧಿಕಾರಿಗಳು ಆಡಳಿತ ನಡೆಸಿದ ಸಂದರ್ಭಗಳಲ್ಲೆಲ್ಲ ಕಸದ ಸಮಸ್ಯೆ ಉಂಟಾಗಿದೆ. ಇದರ ಜವಾಬ್ದಾರಿ ಕಾಂಗ್ರೆಸ್ ಪಕ್ಷಕ್ಕೆ, ಕಾರಣ ಕಾಂಗ್ರೆಸ್ ಸರಕಾರದ ಭಾಗ ಅಧಿಕಾರಿಗಳು. ಇದರ ಪರಿಹಾರ ಜನಪ್ರತಿನಿಧಿಗಳಿಗೆ ಆಗುವುದಾದರೆ ಅಧಿಕಾರಿಗಳಿಗೆ ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.
ಸುಳ್ಯಕ್ಕೆ ಮಂಜೂರಾದ ಕ್ಷೇಮ ಕೇಂದ್ರಕ್ಕೆ ಜಾಗ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದರು. ನಗರ ಪಂಚಾಯತ್ ಚುನಾವಣೆ ಯಾವಾಗ ನಡೆದರೂ ಅದನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ವಿನಯಕುಮಾರ್ ಮುಳುಗಾಡು, ಮುಖಂಡರಾದ ಎ.ಟಿ.ಕುಸುಮಾಧರ, ಸುಭೋದ್ ಶೆಟ್ಟಿ ಮೇನಾಲ, ಜಗನ್ನಾಥ ಜಯನಗರ, ರಾಜೇಶ್ ಮೇನಾಲ,ನಾರಾಯಣ ಶಾಂತಿನಗರ ಉಪಸ್ಥಿತರಿದ್ದರು.












