ಬಾಳಿಲ:ವಿದ್ಯಾಬೋಧಿನೀ ಪ್ರೌಢ ಶಾಲೆಯ ಹತ್ತನೆ ತರಗತಿಯ ಉತ್ತಮ್ ಕೆ 625 ರಲ್ಲಿ 616 ಅಂಕ ಗಳಿಸುವುದರೊಂದಿಗೆ ರಾಜ್ಯದಲ್ಲೇ ಹತ್ತನೆ ಸ್ಥಾನ ಗಳಿಸಿರುತ್ತಾರೆ. ವಾರ್ಷಿಕ ಪರೀಕ್ಷೆಗೆ ಹಾಜರಾದ 72 ಮಂದಿ ವಿದ್ಯಾರ್ಥಿಗಳಲ್ಲಿ
69 ಮಂದಿ ಉತ್ತೀರ್ಣರಾಗಿ ಶೇ.95.83 ರ ಫಲಿತಾಂಶ ದಾಖಲಾಗಿದೆ. ವಿಶಿಷ್ಟ ಶ್ರೇಣಿಯಲ್ಲಿ 14 ಮಂದಿ, 34 ಮಂದಿ ಪ್ರಥಮ ದರ್ಜೆ ದ್ವಿತೀಯ 13, ತೃತೀಯ ದರ್ಜೆಯಲ್ಲಿ 8 ಮಂದಿ ವಿದ್ಯಾರ್ಥಿಗಳು ಉತ್ತೀರ್ಣ ರಾಗಿರುತ್ತಾರೆ. ಉತ್ತಮ ಸಾಧನೆಯನ್ನು ಮಾಡಿದ ಎಲ್ಲ ವಿದ್ಯಾರ್ಥಿಗಳಿಗೂ, ತರಬೇತುಗೊಳಿಸಿದ ನಮ್ಮ ಶಾಲೆಯ ಅಧ್ಯಾಪಕ ವೃಂದದವರಿಗೂ, ಪೋಷಕ ರಿಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.





