ಸುಳ್ಯ: ಮೊಬೈಲ್ ಮಳಿಗೆಗೆ ರಿಚಾರ್ಚ್ಗೆಂದು ಬಂದ ಯುವತಿಯ ಫೋಟೋವನ್ನು ಕ್ಲಿಕ್ಕಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಪೊಲೀಸ್ ಇಲಾಖೆ ಈ ಘಟನೆಯನ್ಬು ಗಂಭೀರವಾಗಿ ಪರಿಗಣಿಸಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಒತ್ತಾಯಿಸಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ
ಸುದ್ದಿಗೋಷ್ಠಿಯಲ್ಲಿ ನಡೆಸಿದ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ್ ಪೈಕ, ಭಜರಂಗದಳ ತಾಲೂಕು ಸಂಚಾಲಕ ಹರಿಪ್ರಸಾದ್ ಬಿ.ವಿ ಹಾಗೂ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ ಮಾತನಾಡಿ
ಮೊಬೈಲ್ ರೀ ಚಾರ್ಚ್ ಮಾಡಲು ಹೋದ ಯುವತಿಯ ಫೋಟೊ ತೆಗೆಯುವ ಅವಶ್ಯಕತೆ ಏನಿತ್ತು. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಹಿರಿಯ ಅಧಿಕಾರಿಗಳು ಕೂಡಾ ಗಮನ ಹರಿಸಬೇಕು. ಪೋಲೀಸ್ ಇಲಾಖೆ ನಿರ್ಲಕ್ಷ್ಯ ತೋರಿದರೆ ಸಂಘಟನೆಯ ವತಿಯಿಂದ ಹೋರಾಟ ನಡೆಸಲಾಗುವುದು. ಈ ರೀತಿಯ ಘಟನೆ ಮರುಕಳಿಸ ಬಾರದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿ.ಹಿಂ.ಪ ಉಪಾಧ್ಯಕ್ಷ ಮನೋಜ್ ಕುಮಾರ್, ದೀಕ್ಷಿತ್ ಪಾನತ್ತಿಲ, ರೂಪೇಶ್ ಪೂಜಾರಿಮನೆ, ರೋಹಿತ್ ಹೊದ್ದೆಟ್ಟಿ ಇದ್ದರು.