ಮಡಿಕೇರಿ:ಸುಳ್ಯದಲ್ಲಿ ಕೇಂದ್ರ ಕಚೇರಿ ಹೊಂದಿರುವ
ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 24ನೇ ಶಾಖೆಯು ಕೊಡಗು ಜಿಲ್ಲೆಯ ಮೂರ್ನಾಡ್ನಲ್ಲಿ ಫೆ.15ರಂದು ಉದ್ಘಾಟನೆಗೊಳ್ಳಲಿದೆ.ಮೂರ್ನಾಡ್ ಮುಖ್ಯರಸ್ತೆಯಲ್ಲಿರುವ ಕುಂತೋಡಿರ ದೇವಯ್ಯರವರ ಮಾಲಕತ್ವದ ಶ್ರೀ ವೆಂಕಟೇಶ್ವರ ಕಾಂಪ್ಲೆಕ್ಸ್ನ ಮೊದಲನೇ
ಮಹಡಿಯಲ್ಲಿ ನೂತನ ಶಾಖೆ ಉದ್ಘಾಟನೆಯಾಗಲಿದೆ ಎಂದು ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಧ್ಯಕ್ಷ ಕೆ.ಸಿ.ಸದಾನಂದ ತಿಳಿಸಿದ್ದಾರೆ. ಮಡಿಕೇರಿ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ಮಾಹಿತಿ ನೀಡಿದರು. ಉದ್ಘಾಟನಾ ಸಮಾರಂಭದ
ಸಭಾ ಕಾರ್ಯಕ್ರಮವು ‘ಗೌಡ ಸಮಾಜ ಮೂರ್ನಾಡ್’ನಲ್ಲಿ ನಡೆಯಲಿದೆ. ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ. ‘ದೀಪ ಪ್ರಜ್ವಲನೆ’ಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನೆರವೇರಿಸುವರು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಸಿ.ಸದಾನಂದ ವಹಿಸಲಿದ್ದಾರೆ.
ಭದ್ರತಾ ಕೊಠಡಿಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಗಣಕೀಕರಣವನ್ನು ಅರುಣ್ ಅಪ್ಪಚ್ಚು ಬಡವಂಡ, ಅಧ್ಯಕ್ಷರು ವರ್ತಕರ ಸಂಘ ಮೂರ್ನಾಡ್, ಪ್ರಥಮ ಪಾಲುಪತ್ರ ವಿತರಣೆಯನ್ನು ಪಾಣತ್ತಲೆ ಟಿ ಹರೀಶ್, ಅಧ್ಯಕ್ಷರು ಗೌಡ ಸಮಾಜ ಮೂರ್ನಾಡ್, ಪ್ರಥಮ ಠೇವಣಿಪತ್ರವನ್ನು ಕೊಡಗು ಜಲ್ಲೆಯ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ನವೀನ್ ಅಂಬೆಕಲ್ಲು, ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಕುಶನ್ ರೈ ಅಧ್ಯಕ್ಷರು ಗ್ರಾಮ ಪಂಚಾಯತ್ ಕಾಂತೂರು ಮೂರ್ನಾಡ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಂಬೀರಂಡ ಬಿ ಕಾಳಪ್ಪ ಮಾಜಿ ಅಧ್ಯಕ್ಷರು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರ ಸಂಘ ಕೊಡಗು ಜಿಲ್ಲೆ, ಹಾಗೂ ವೆಂಕಟೇಶ್ವರ ಕಾಂಪ್ಲೆಕ್ಸ್ನ ಮಾಲಕರಾದ ಕುಂತೋಡಿರ ದೇವಯ್ಯ ಭಾಗವಹಿಸಲಿದ್ದಾರೆ ಎಂದು ಕೆ.ಸಿ ಸದಾನಂದ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ನಿರ್ದೇಶಕರಾದ
ಸದಾನಂದ ಮಾವಜಿ, ದಾಮೋದರ ನಾರ್ಕೋಡು,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ ಉಪಸ್ಥಿತರಿದ್ದರು.







