ಸುಳ್ಯ: ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಇದರ ಪ್ರಯುಕ್ತ 52ನೇ ವರ್ಷದ ಶಾರದಾಂಬಾ ಉತ್ಸವ ಸುಳ್ಯ ದಸರಾದ ಶೋಭಾಯಾತ್ರೆಯಲ್ಲಿ ವೀರಕೇಸರಿ ವಿಷ್ಣು ಸರ್ಕಲ್ನ ವತಿಯಿಂದ 18ನೇ ವರ್ಷದ ಟ್ಯಾಬ್ಲೋ ಹಾಗೂ
ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು. ವೀರಕೇಸರಿಯ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಮಿತಿಯ ಕಾರ್ಯದರ್ಶಿ ಮೋಹನ್ದಾಸ್ ಪಂಜ, ಉಪಾಧ್ಯಕ್ಷ ದೀಪಕ್.ಪಿ.ಎಸ್, ಅನಿಲ್.ಕೆ.ಸಿ, ಕಾಯರ್ತೋಡಿ ದೇವಸ್ತಾನದ ಅರ್ಚಕ ನೀಲಕಂಠ, ಸಮಿತಿಯ ಪದಾಧಿಕಾರಿಗಳಾದ ಬಾಲಕೃಷ್ಣ, ಮಿಥುನ್, ಕಿರಣ್ ಕುಮಾರ್, ಮನಮೋಹನ್, ಸಂದೇಶ್ ಕಾಯರ್ತೋಡಿ, ಪ್ರಶಾಂತ್ ಕುಕ್ಕುಜಡ್ಕ, ಕಾರ್ತಿಕ್ ಮತ್ತಿತರರು ಭಾಗವಹಿಸಿದ್ದರು.