ಮೇನಾಲ: ವಿಷ್ಣು ಗೇಮ್ಸ್ ಕ್ಲಬ್ ಮೇನಾಲ ಇದರ ಆಶ್ರಯದಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿ ಮೇನಾಲ ಇದರ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಶಿವಪ್ರಸಾದ್ ಕೆದಿಲಾಯ ಇವರ ಪೂಜಾ ಕಾರ್ಯಕ್ರಮಗಳೊಂದಿಗೆ ಮೇನಾಲ ಭಜನಾ ಮಂದಿರದಲ್ಲಿ ನಡೆಯಿತು. ಊರ ಹಾಗೂ ಪರವೂರ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಧಾರ್ಮಿಕ ಸಭಾ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಪ್ರಜ್ಞಾ ರಾಜೇಶ್ ಶೆಟ್ಟಿ ಮೇನಾಲ ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ನೀಡಿದರು. ವೇದಿಕೆಯಲ್ಲಿ ವಿಷ್ಣು ಗೇಮ್ಸ್ ಕ್ಲಬ್ ನ ಅಧ್ಯಕ್ಷರಾದ ಸುನೀಲ್ ಇರಂತಮಜಲು. ಕೃಷ್ಣ ಭಜನಾ ಮಂದಿರ ಮೇನಾಲ ಇದರ ಅಧ್ಯಕ್ಷ ಬಾಲಕೃಷ್ಣ ಪಿ ಎಸ್ ಉಪಸ್ಥಿತರಿದ್ದರು. ಆಪ್ತ ರೈ ಸ್ವಾಗತಿಸಿ. ಸಾಕ್ಷಿ ಅತಿಥಿ ಗಳನ್ನು ಪರಿಚಯಿಸಿದರು. ಭೂಮಿಕಾ ವಂದಿಸಿದರು. ನಿರೀಕ್ಷಾ ಸುಲಾಯ ಮತ್ತು ಕು ಪೃಥ್ವಿ ಕಾರ್ಯಕ್ರಮ ನಿರೂಪಿಸಿ ದರು. ಈ ಸಂದರ್ಭದಲ್ಲಿ ಯೋಗದಲ್ಲಿ ವಿಶೇಷ ಸಾಧನೆ ಮಾಡಿದ ಬಾಲಕ ಆಶ್ರಿತ್ ಆಮೆಮನೆ ಇವರನ್ನು ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆ ಮಾಡಿದ ಕು ವೈಷ್ಣವಿ ಮೇನಾಲ ಹಾಗೂ ಮೇನಾಲ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯರಿಗೆ ಕುಣಿತ ಭಜನೆ ತರಬೇತಿ ನೀಡಿದ ನಿಖಿಲ್ ಕುಲಾಲ್ ಆರಂಬೂರು ಮತ್ತು ವರಮಹಾಲಕ್ಷ್ಮಿಪೂಜಾ ಸಮಿತಿಯ ಮಾರ್ಗದರ್ಶಕರಾದ ಬಾಲಕೃಷ್ಣ ಪಿ ಎಸ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಗೆ ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ ನಡೆಯಿತು. ನಂತರ ಪ್ರಸಾದ ಭೋಜನದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.









