ನವದೆಹಲಿ; ಕಾಸರಗೋಡು- ತಿರುವನಂತಪುರಂ, ಬೆಂಗಳೂರು-ಹೈದರಾಬಾದ್ ರೈಲು ಸೇರಿ ಒಂಬತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈಗಾಗಲೇ 25 ವಂದೇ ಭಾರತ್ ರೈಲುಗಳು ಸೇವೆಯಲ್ಲಿವೆ. ಇದರೊಂದಿಗೆ
ಕಾಸರಗೋಡಿನಿಂದ ಆರಂಭಗೊಂಡ ವಂದೇ ಭಾರತ್ ಎಕ್ಸ್ಪ್ರೆಸ್
ದೇಶಾದ್ಯಂತ ಚಾಲನೆಯಲ್ಲಿರುವ ವಂದೇ ಭಾರತ್ ರೈಲುಗಳ ಸಂಖ್ಯೆ 34ಕ್ಕೆ ಏರಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಇವತ್ತು ಚಾಲನೆಗೊಂಡ 9 ರೈಲುಗಳಲ್ಲಿ ಮಧ್ಯಪ್ರದೇಶಕ್ಕೆ 3 ರೈಲುಗಳು ಸಿಕ್ಕಿದೆ. ತಮಿಳುನಾಡಿಗೆ ಎರಡು ರೈಲುಗಳು ಸಿಕ್ಕಿವೆ. ಇನ್ನು, ಕರ್ನಾಟಕಕ್ಕೆ ಒಂದು ಸಿಕ್ಕಿದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಈ ರೈಲು ಸಂಚರಿಸುತ್ತದೆ. ಕೇರಳಕ್ಕೆ ಒಂದು ರೈಲು ಸಿಕ್ಕಿದ್ದು ಕಾಸರಗೋಡು- ತಿರುವನಂತಪುರಂ ಮಧ್ಯೆ ಓಡಾಟ ನಡೆಸಲಿದೆ. ಕಾಸರಗೋಡು-ತಿರುವನಂತಪುರಂ ಮಧ್ಯೆ ಎರಡನೇ ವಂದೇ ಭಾರತ್ ರೈಲು ಇಂದು ಓಡಾಟ ಆರಂಭಿಸಿದೆ.