ಸುಳ್ಯ:ಗ್ರಾಮೀಣ ಬಡ ಕುಟುಂಬಕ್ಕೆ ಅನುಕೂಲವಾಗಿರುವ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಈ ಹಿಂದಿದ್ದ ಮಾನದಂಡದಲ್ಲಿ ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅನೇಕ ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು ಕೇಂದ್ರ ಸರ್ಕಾರದ
ಕ್ರಮ ಸ್ವಾಗತಾರ್ಹ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.
ದ್ವಿಚಕ್ರ ವಾಹನ,ರೆಫ್ರಿಜರೇಟರ್, ಮತ್ತು ತಿಂಗಳಿಗೆ 15 ಸಾವಿರ ಆದಾಯ ಗಳಿಸುವ ಕುಟುಂಬಗಳು ಇನ್ನು ಈ ಯೋಜನೆ ಸದುಪಯೋಗ ಪಡಿಸಬಹುದು.ಇನ್ನು ಅನೇಕ ಷರತ್ತುಗಳನ್ನು ಸಡಿಲ ಮಾಡುವುದರ ಮೂಲಕ ಗ್ರಾಮೀಣ ಬಡ ಜನರಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಸಹಕಾರಿ ಯಾಗಲಿದೆಯೆಂದು ವೆಂಕಟ್ ವಲಳಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.