ಪಂಜ: ಪಂಜದ ವಿ.ಕೆ ರೆಸಿಡೆನ್ಸಿ ಯಲ್ಲಿ ಉಷಾ ಮೆಡಿಕಲ್ಸ್ ಪಂಜ ಶಾಖೆ ಏ.13 ರಂದು ಶುಭಾರಂಭ ಗೊಂಡಿತು. ಹಿರಿಯ ವೈದ್ಯ ಡಾ.ರಾಮಯ್ಯ ಭಟ್ ಉದ್ಘಾಟಸಿದರು.ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕೆ ಎಸ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಡ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರ್ ,ವಿ.ಕೆ ರೆಸಿಡೆನ್ಸಿ ಮಾಲಕ
ವಿಜಯ ಕುಮಾರ್ ಸೊರಕೆ, , ಸಂತ ರೀತ ಚರ್ಚ್ ಧರ್ಮ ಗುರು ಫಾ. ಅಮಿತ್ ರೋಡ್ರಿಗಸ್, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ, ಸುಳ್ಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್, ಹಾಗೂಪ್ರಗತಿಪರ ಕೃಷಿಕ ಹಾಗೂ ಸಮಾಜಸೇವಕ ಕಂಬಳ ಆನಂದ ಗೌಡ, ಸಂಸ್ಥೆಯ ಮುಖ್ಯಸ್ಥರಾದ
ಅರುಣಾ ಜಿ ಭಟ್,ಪಿ ಗಣೇಶ್ ಭಟ್ ಹಾಗೂ ಆದಿತ್ಯ ಕಶ್ಯಪ್ ಯಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಹಾಗೂ ಸಮಾಜಸೇವಕ ಕಂಬಳ ಆನಂದ ಗೌಡ, ಸಮಾಜಕ್ಕಾಗಿ ಯುವ ತೇಜಸ್ಸು ಟ್ರಸ್ಟ್ ಪಂಜ, ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವರ್ಷಲಕ್ಷ್ಮಿ ಪ್ರಾರ್ಥಿಸಿದರು.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಸೋಮಶೇಖರ ನೇರಳ ನಿರೂಪಿಸಿದರು. ಮಾಲಕ ಪಿ.ಗಣೇಶ್ ಭಟ್ ವಂದಿಸಿದರು.