ಸುಳ್ಯ:ಅಗಲಿದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಸುಳ್ತ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು. ಅಗಲಿದ ಉಪೇಂದ್ರ ಕಾಮತ್ ಅವರು ಸುಳ್ಯದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಉದ್ಯಮವನ್ನು ಸ್ಥಾಪಿಸಿ ಹಲವಾರು ಕುಟುಂಬಗಳಿಗೆ
ಅನ್ನದಾತರಾಗಿದ್ದ ಅವರು ಈ ಭಾಗದ ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಗಣ್ಯರು ನುಡಿನಮನ ಸಲ್ಲಿಸಿದರು.
ಮಾಜಿ ಸಚಿವ ಎಸ್.ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ರಾಷ್ಟ್ರ ಪ್ರಶಸ್ತಿ ವಿಜೇತರಾದ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಎಂ.ಬಿ.ಫೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ, ಆರ್ಎಸ್ಎಸ್ ತಾಲೂಕು ಸಂಘ ಚಾಲಕ್ ಚಂದ್ರಶೇಖರ ತಳೂರು, ಹಿರಿಯ ಉದ್ಯಮಿ ಕೃಷ್ಣ ಕಾಮತ್, ಸುಳ್ಯ
ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಪ್ರಮುಖರಾದ ಜಿ.ಜಿ.ನಾಯಕ್, ಪಿ.ಕೆ.ಉಮೇಶ್, ಶಕುಂತಳಾ ಎಸ್, ಡಾ.ಎನ್.ಎ.ಜ್ಞಾನೇಶ್ ಮತ್ತಿತರರು
ನುಡಿನಮನ ಸಲ್ಲಿಸಿದರು. ಹಿರಿಯರಾದ
ನ.ಸೀತಾರಾಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಯಕುಮಾರ್ ಕಂದಡ್ಕ ಆಶಯ ಗೀತೆ ಹಾಡಿದರು. ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.
ಉಪೇಂದ್ರ ಕಾಮತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೌನ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿಯತು.