ಬ್ಲೂಮ್ಫಾಂಟೆನ್: ಅರಶಿಣ್ ಕುಲಕರ್ಣಿ ಅವರ ಅಮೋಘ ಶತಕದ ಬಲದಿಂದ ಭಾರತ ಕ್ರಿಕೆಟ್ ತಂಡವು 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಎದುರಿನ ಪಂದ್ಯದಲ್ಲಿ 201 ರನ್ಗಳಿಂದ ಗೆದ್ದಿತು. ಇದರೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ ಸಿಕ್ಸ್ ಹಂತದಲ್ಲಿ ಸ್ಥಾನವನ್ನು ಗಟ್ಟಿಗಳಿಸಿಕೊಂಡಿತು. ಟಾಸ್ ಗೆದ್ದ ಅಮೆರಿಕ
ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅರಶಿಣ್ ಕುಲಕರ್ಣಿ (108; 118ಎ, 4X8, 6X3) ಮತ್ತು ಮುಷೀರ್ ಖಾನ್ (73; 76ಎ, 4X6, 6X1) ಅವರ ಭರ್ಜರಿ ಬ್ಯಾಟಿಂಗ್ನಿಂದಾಗಿ ಭಾರತ ತಂಡವು 50 ಓವರ್ಗಳಲ್ಲಿ 5 ವಿಕೆಟ್ಗಳಿಗೆ 326 ರನ್ ಗಳಿಸಿತು.
ಭಾರತದ ಮೂಲದ ಆಟಗಾರರೇ ಇರುವ ಅಮೆರಿಕ ತಂಡವು ಗುರಿ ಬೆನ್ನಟ್ಟಿ ತಾಳ್ಮೆಯ ಬ್ಯಾಟಿಂಗ್ ಮಾಡಿ 50 ಓವರ್ಗಳನ್ನೂ 8 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತು. ಅದರಲ್ಲಿ ಉತ್ಕರ್ಷ್ ಶ್ರೀವಾಸ್ತವ್ 40 ಮತ್ತು ಅಮೋಘ್ ಅರೇಪಳ್ಳಿ 27 ರನ್ಗಳನ್ನು ಗಳಿಸಿದರು.
ಭಾರತ ತಂಡದ ಬೌಲರ್ ನಮನ್ ತಿವಾರಿ ನಾಲ್ಕು ವಿಕೆಟ್ ಗಳಿಸಿದರು.














