ಸುಳ್ಯ:ಪೆರಾಜೆಯ ಅಲ್ ಅಮೀನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾದಕ ವ್ಯಸನದ ವಿರುದ್ದ ಜನಜಾಗೃತಿ ಯಾತ್ರೆ ಅ.12 ರಂದು ಆರಂಭಗೊಳ್ಳಲಿದೆ. ಭಾರತದಾದ್ಯಂತ ನಡೆಯುವ ಜನಜಾಗೃತಿ ಯಾತ್ರೆ ಪೆರಾಜೆಯಿಂದ ಪ್ರಾರಂಭವಾಗಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಉನೈಸ್ ಪೆರಾಜೆ ಹೇಳಿದರು.ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದರು. ಇದೀಗ ನಾಡಿನೆಲ್ಲೆಡೆ ಯುವ ಜನತೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಸಮಾಜವನ್ನು ಮುಕ್ತಿ ಹೊಂದಿಸುವ ಸಲುವಾಗಿ ಭಾರತದಾಧ್ಯಂತ ಜನ ಜಾಗೃತಿ ಯಾತ್ರೆ ನಡೆಯಲಿದೆ. ಮೊದಲ ಹಂತದಲ್ಲಿ ಪೆರಾಜೆಯಿಂದ ಕನ್ಯಾಕುಮಾರಿ ಮರೆಗಿನ ಮೊದಲ ಹಂತದ ಯಾತ್ರೆಗೆ ಅ.12ರಂದು ಚಾಲನೆ ನೀಡಲಾಗುವುದು ಎಂದು ಹೇಳಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳ ತನಕ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಶ್ರಫ್ ಡಿ ಎಂ , ಲತೀಫ್ ಪಿ ಎ , ಅಬ್ದುಲ್ ರಝಾಕ್ , ಅಶ್ರಫ್ ಪಿ ಎಂ , ಇಸಾಮುದ್ದಿನ್ ಉಪಸ್ಥಿತರಿದ್ದರು.