ಅರಂತೋಡು:ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಸುಳ್ಯ ತಾಲೂಕು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಅವರಿಗೆ ಸುಳ್ಯ ತಾಲೂಕು ಸಂಯುಕ್ತ ಜಮಾಅತ್ ವತಿಯಿಂದ ಬೀಳ್ಕೊಡುವ ಕಾರ್ಯಕ್ರಮ ಅರಂತೋಡಿನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಯುಕ್ತ ಜಮಾಅತ್ನ
ಅಧ್ಯಕ್ಷ ಅಬ್ದುಲ್ ಖಾದರ್ ಬಾಯಂಬಾಡಿ ಶಾಲು ಹೊದಿಸಿ ಗೌರವಿಸಿದರು.ಹಾಜಿ ಅಬ್ಬಾಸ್ ಸಂಟ್ಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ಳಾರೆ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮಂಗಳ, ಕಲ್ಲುಗುಂಡಿ ಜುಮಾ ಮಸೀದಿ ಅಧ್ಯಕ್ಷ ಆಲಿ ಹಾಜಿ, ಸಂಯುಕ್ತ ಜಮಾಅತ್ ಸದಸ್ಯರಾದ ತಾಜ್ ಮಹಮ್ಮದ್ ಸಂಪಾಜೆ ಜಿ.ಕೆ.ಹಮೀದ್ ಗೂನಡ್ಕ, ಇರ್ಷಾದ್ ಬದ್ರಿಯಾ, ಕೋಶಾಧಿಕಾರಿ ಹಮೀದ್ ಹಾಜಿ. ಮೂಸಾನ್ ಸಂಟ್ಯಾರ್ ಅಬೂಬಕ್ಕರ್ ಪಾರೆಕಲ್, ಅಬ್ದುಲ್ ಖಾದರ್ ಪಟೇಲ್. ಅರಂತೋಡು ಜುಮಾ ಮಸೀದಿ ಉಪಾಧ್ಯಕ್ಷ ಮಹಮದ್ ಹಾಜಿ, ಅಮೀರ್ ಕುಕ್ಕುಂಬಳ,ಜುಬೇರ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.












