ಸುಳ್ಯ: ಉಬರಡ್ಕಮಿತ್ತೂರು ಸಹಕಾರ ಸಂಘದ ಅಧ್ಯಕ್ಷರಾಗಿ ಹರಿಪ್ರಸಾದ್ ಪಾನತ್ತಿಲ ಹಾಗೂ ಉಪಾಧ್ಯಕ್ಷರಾಗಿ ವಿಜಯಕುಮಾರ್ ಉಬರಡ್ಕ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ವಿಜಯಕುಮಾರ್
ಅವಿರೋಧವಾಗಿ ಆಯ್ಕೆಯಾದರೆ, ಚುನಾವಣೆ ಮೂಲಕ ವಿಜಯ ಕುಮಾರ್ ಉಬರಡ್ಕ ಗೆಲುವು ಸಾಧಿಸಿದರು. ಅಧ್ಯಕ್ಷತೆಗೆ
ಹರಿಪ್ರಸಾದ್ ಪಾನತ್ತಿಲ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷತೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಬೆಂಬಲಿತ ಸದಸ್ಯರಾದ ಪ್ರಭಾಕರ ಅಮೈ ಹಾಗೂ ವಿಜಯಕುಮಾರ್ ಉಬರಡ್ಕ ನಾಮಪತ್ರ ಸಲ್ಲಿಸಿದರು.
ಚುನಾವಣೆ ನಡೆದು ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸೇರಿ 12 ಮಂದಿ ಮತ ಚಲಾಯಿಸಿದರು. ಒಬ್ಬರು ಸದಸ್ಯರು ಗೈರು ಹಾಜರಾಗಿದ್ದರು. ವಿಜಯಕುಮಾರ್ ಉಬರಡ್ಕ ಹಾಗೂ ಪ್ರಭಾಕರ ಅಮೈ ತಲಾ 6 ಮತ ಪಡೆದು ಸಮಬಲ ಸಾಧಿಸಿದರು. ಅದೃಷ್ಟ ಚೀಟಿ ಎತ್ತಿ ವಿಜಯ ಕುಮಾರ್ ಉಪಾಧ್ಯಕ್ಷ ರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಶಿವಲಿಂಗಯ್ಯ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.






