ಸುಳ್ಯ: 33 ಕೆವಿ ಲೈನ್ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸುಳ್ಯಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಧ್ಯಾಹ್ನ ತನಕ ವಿದ್ಯುತ್ ಸರವರಾಜು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸುಳ್ಯಕ್ಕೆ ವಿದ್ಯತ್ ಲೈನ್ ಹಾದು ಬರುವ ಲೈನ್ ಮೇಲೆ
ಸುಳ್ಯ ಜ್ಯೂನಿಯರ್ ಕಾಲೇಜಿನ ಹಿಂಭಾಗದಲ್ಲಿ ಮರ ಬಿದ್ದು ಸಂಪರ್ಕ ಕಡಿತಗೊಂಡಿದೆ. ಮಧ್ಯರಾತ್ರಿಯ ವೇಳೆಗೆ
ಭಾರೀ ಗಾಳಿ ಮಳೆಗೆ ಮರ ಬಿದ್ದು ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ. ಮರ ತೆರವು ಮಾಡಿ ವಿದ್ಯುತ್ ಸಂಪರ್ಕ ಸರಿ ಪಡಿಸುವುವಾಗ ಮಧ್ಯಾಹ್ನ ಆಗಬಹುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ.
ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ನಿರಂತರ ಮುಂದುವರಿದಿದೆ. ಮಳೆ ಆರಂಭವಾದ ಮೇಲೆ ವಾರದಲ್ಲಿ ಹಲವು ಬಾರಿ ಈ ರೀತಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.