ಸುಳ್ಯ: ಸುಳ್ಯ ನಗರದ ರಸ್ತೆಯಲ್ಲಿ ಇಂದು ಟ್ರಾಫಿಕ್ ಜಾಮ್ ಜಾಮ್..
ಬೆಳಗ್ಗಿನಿಂದಲೇ ಸುಳ್ಯದಲ್ಲಿ ಭಾರೀ ರಶ್ ಕಂಡು ಬಂದಿದ್ದು ರಸ್ತೆಯಲ್ಲಿ ವಾಹನಗಳ ಸರತಿ ಸಾಲು ಕಂಡು ಬಂದಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯ ನಗರದಲ್ಲಿ ರಶ್ ಕಂಡು ಬಂದಿದೆ. ಹಬ್ಬದ ಖರೀದಿ ಮತ್ತಿತರ ಅಗತ್ಯತೆಗಳಿಗೆ ಮತ್ತು ಸೋಮವಾರ ಆದ ಕಾರಣ ತಾಲೂಕಿನ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ಆಗಮಿಸಿದೆ. ಪೇಟೆಯಲ್ಲಿ ನೂರಾರು ವಾಹನಗಳ ಉದ್ದ ಸಾಲು ಕಂಡು ಬಂದಿದೆ. ಕಿರಿದಾದ

ರಸ್ತೆಯಲ್ಲಿ ನೂರಾರು ವಾಹನಗಳ ಸಾಲು ಟ್ರಾಫಿಕ್ ಜಾಮ್ ಸೃಷ್ಠಿಸುತ್ತಿತ್ತು. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಮತ್ತು ಹೋಂಗಾರ್ಡ್ ಸಿಬ್ಬಂದಿಗಳು ಹರ ಸಾಹಸ ಪಡುವುದು ಕಂಡು ಬಂದಿತ್ತು. ವಾರದ ಕೆಲವು ದಿನಗಳಲ್ಲಿ ಈ ರೀತಿ ಟ್ರಾಫಿಕ್ ಜಾಮ್ ಕಂಡು ಬರುತ್ತಿದೆ. ಅಲ್ಲದೆ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಶಾಲಾ ಸಮಯದಲ್ಲಿ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಸಾಮಾನ್ಯ. ಆದರೆ ಇಂದು ಹಗಲು ಹೊತ್ತು ಬಾರೀ ರಶ್ ಕಂಡು ಬಂದಿತ್ತು.
ಎರಡೂ ಬದಿ ಪಾರ್ಕಿಂಗ್ನಿಂದ ಟ್ರಾಫಿಕ್ ಕಿರಿ ಕಿರಿ:
ಸುಳ್ಯ ನಗರದಲ್ಲಿ ವಾಹನ ಪಾರ್ಕಿಂಗ್ ಮಾಡಲು ಸೂಕ್ತವಾದ ಪ್ರತ್ಯೇಕ ಪಾರ್ಕಿಂಗ್ ಸ್ಥಳ ಇಲ್ಲದ ಕಾರಣ ರಸ್ತೆಯ ಬದಿಯಲ್ಲಿಯೇ ವಾಹನ ಪಾರ್ಕಿಂಗ್ ಮಾಡಲಾಗುತ್ತದೆ. ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಒಂದು ದಿನ ರಸ್ತೆಯ ಬಲ ಬದಿ, ಮರುದಿನ ರಸ್ತೆಯ ಎಡ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಬೇಕು ಎಂದು ಪೊಲೀಸ್ ಇಲಾಖೆ ಹಿಂದೆಯೇ ಕಾನೂನು ರೂಪಿಸಿತ್ತು.ಅದೇ ರೀತಿ

ಮುಂದುವರಿಯುತಿದೆ. ಇದನ್ನು ಸರಿಯಾಗಿ ಪಾಲನೆ ಮಾಡಿದರೆ ನಗರದ ವಾಹನ ದಟ್ಟಣೆ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಆದರೆ ಇತ್ತೀಚೆಗೆ ಕೆಲವು ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವುದರಿಂದ ಮತ್ತು ಎಗ್ಗಿಲ್ಲದೆ ಎರಡೂ ಬದಿ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ನಗರದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ.ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಎರಡೂ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದು.ಕೆಲವು ಘನ ವಾಹನಗಳು ಹಗಲಿನ ಹೊತ್ತು ರಸ್ತೆ ಬದಿಯಲ್ಲಿ ನಿಲ್ಲಿಸಿ ಅನ್ ಲೋಡ್ ಮಾಡುವುದರಿಂದ ಸರಾಗವಾದ ವಾಹನ ಸಂಚಾರಕ್ಕೆ ತೊಡಕಾಗುತಿದೆ ಎಂದು ಸಾರ್ವಜನಿಕರು ದೂರುತ್ತಾರೆ.ಕೆಲವು ವಾಹನ ಸವಾರರ ಅತಿವೇಗದ ಮತ್ತು ಅಜಾಗರುಕತೆಯ ವಾಹನ ಚಾಲನೆಯೂ ಭಯ ಹುಟ್ಟಿಸುತ್ತಿದೆ.









