ಸುಳ್ಯ:ಸುಳ್ಯ ನಗರದ ವಿಕಲಚೇತನರಿಗೆ ಪೋಷಣಾ ಭತ್ಯೆ ಚೆಕ್ ವಿತರಣೆ, ಪೌರ ಕಾರ್ಮಿಕರಿಗೆ ಆರೋಗ್ಯ ಕಿಟ್ ವಿತರಣೆ ಮತ್ತು ವಿಶ್ವ ಜಾಂಬೂರಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಸುಳ್ಯ ನ.ಪಂ.ಸಭಾಂಗಣದಲ್ಲಿ ಬುಧವಾರ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಫಲಾನುಭವಿಗಳಿಗೆ ಚೆಕ್ ವಿತರಣೆ
ಮಾಡಿದರು. ವೇದಿಕೆಯಲ್ಲಿ ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರ ಪಂಚಾಯಿತಿ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕೇರಿ, ಡೇವಿಡ್ ಧೀರಾ ಕ್ರಾಸ್ತ, ಶಶಿಕಲಾ ನೀರಬಿದಿರೆ, ಶೀಲಾ ಅರುಣಾ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಬುದ್ದ ನಾಯ್ಕ್, ನಾರಾಯಣ. ಕೆ, ಶರೀಪ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಪೂಜಿತಾ ಕೇರ್ಪಳ, ಸುಧಾಕರ ಕುರುಂಜಿಭಾಗ್, ಪ್ರವಿತಾ ಪ್ರಶಾಂತ್ ಇದ್ದರು.
ಕಾರ್ಯಕ್ರಮದಲ್ಲಿ ನಗರ ಪಂಚಾಯತಿಯ ಪೌರ ಕಾರ್ಮಿಕರಿಗೆ ಆರೋಗ್ಯ ಕಿಟ್ ವಿತರಣೆ ಮತ್ತು ಗುತ್ತಿಗೆ ನೌಕರರಾಗಿದ್ದ ಕೆಲವು ಪೌರಕಾರ್ಮಿಕರನ್ನು ಸರಕಾರ ಖಾಯಂಗೊಳಿಸಿದ್ದು ಅವರಿಗೆ ನೇಮಕಾತಿ ಆದೇಶವನ್ನು ಶಾಸಕರು ವಿತರಿಸಿದರು. ಅಲ್ಲದೇ ಮೂಡಬಿದಿರೆಯ ಆಳ್ವಾಸ್ನಲ್ಲಿ ನಡೆದ ವಿಶ್ವ ಜಾಂಬೂರಿಯಲ್ಲಿ ಪಾಳ್ಗೊಂಡ ಇಬ್ಬರು ವಿದ್ಯಾರ್ಥಿಗಳಿಗೆ ಸಹಾಯಧನ ಚೆಕ್ ವಿತರಣೆಯನ್ನು ಶಾಸಕರು ಮಾಡಿದರು. ಪ್ರವೀಣ್ ನಾಯಕ್ ಸ್ವಾಗತಿಸಿ, ನ.ಪಂ.ಮುಖ್ಯಧಿಕಾರಿ ಸುಧಾಕರ್ ಎಂ.ಎಚ್ ವಂದಿಸಿದರು. ಸುದೇವ್ ಕಾರ್ಯಕ್ರಮ ನಿರೂಪಿಸಿದರು.