ಸುಳ್ಯ: ಸುಳ್ಯ ನಗರ ಪಂಚಾಯತ್ನ 10ನೇ ಅವಧಿಯ ಅಧ್ಯಕ್ಷೆಯಾಗಿ ಎ.ಶಶಿಕಲಾ ನೀರಬಿದಿರೆ ಹಾಗೂ ಉಪಾಧ್ಯಕ್ಷರಾಗಿ ಬುದ್ಧ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಗರ ಪಂಚಾಯತ್ ಅಧ್ಯಕ್ಷತೆಗೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷತೆಗೆ ಬುದ್ಧ ನಾಯ್ಕ್ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವಿಭಾಗಕ್ಕೆ ಹಾಗೂ
ಉಪಾಧ್ಯಕ್ಷತೆ ಸ್ಥಾನ ಸಾಮಾನ್ಯ ವಿಭಾಗಕ್ಕೆ ಮೀಸಲಾಗಿತ್ತು.
ತಹಶೀಲ್ದಾರ್ ಜಿ.ಮಂಜುನಾಥ್ ಚುನಾವಣಾಧಿಕಾರಿಯಾಗಿದ್ದರು
ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್ ಉಪಸ್ಥಿತರಿದ್ದರು.
ಅಧ್ಯಕ್ಷೆ ಅಭ್ಯರ್ಥಿ ಶಶಿಕಲಾ ನೀರಬಿದಿರೆ ಅವರನ್ನು ವಿನಯಕುಮಾರ್ ಕಂದಡ್ಕ ಸೂಚಿಸಿ, ಸುಧಾಕರ ಕೆ. ಅನುಮೋದಿಸಿದರು.
ಉಪಾಧ್ಯಕ್ಷ ಅಭ್ಯರ್ಥಿ ಬುದ್ಧ ನಾಯ್ಕ ಅವರನ್ನು ಶೀಲಾ ಅರುಣ ಕುರುಂಜಿ ಸೂಚಿಸಿ, ಬಾಲಕೃಷ್ಣ ರೈ ದುಗಲಡ್ಕ ಅನುಮೋದಿಸಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ನಗರ ಪಂಚಾಯತ್ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್, ಕೆ.ಎಸ್.ಉಮ್ಮರ್, ಧೀರಾ ಕ್ರಾಸ್ತಾ, ಬಾಲಕೃಷ್ಣ ರೈ, ದುಗ್ಗಲಡ್ಕ,ಸುಧಾಕರ ಕುರುಂಜಿಗುಡ್ಡೆ, ನಾರಾಯಣ ಶಾಂತಿನಗರ, ಶರೀಫ್ ಕಂಠಿ, ರಾಜು ಪಂಡಿತ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ಪೂಜಿತಾ ಕೆ.ಯು, ಸರೋಜಿನಿ ಪೆಲ್ತಡ್ಕ, ಶಿಲ್ಪಾ ಸುದೇವ್, ಸುಶೀಲಾ ಜಿನ್ನಪ್ಪ, ಪ್ರವಿತಾ ಪ್ರಶಾಂತ್, ವಾಣಿಶ್ರೀ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ, ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.