ಸುಳ್ಯ:ನಗರ ಪಂಚಾಯತ್ ಆಡಳಿತ ಮಂಡಳಿ ಇದ್ದ ಸಂದರ್ಭದಲ್ಲಿ ಭಾರೀ ಚರ್ಚೆ, ಗದ್ದಲ ಕೋಲಾಹಲಕ್ಕೆ ಕಾರಣವಾಗುತ್ತಿದ್ದ ನಗರ ಪಂಚಾಯತ್ ಬಜೆಟ್ ಮಂಡನಾ ಸಭೆ ಈ ಬಾರಿ ಯಾವುದೇ ಸದ್ದು ಗದ್ದಲವಿಲ್ಲದೆ ಅತ್ಯಂತ ಸರಳವಾಗಿ ನಡೆಯಿತು. ಆಡಳಿತ ಮಂಡಳಿ ಇದ್ದ ಸಂದರ್ಭದಲ್ಲಿ
ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಮಧ್ಯೆ ಬಿರುಸಿನ ಚರ್ಚೆಗೆ ವೇದಿಕೆಯಾಗುತ್ತಿತ್ತು.ಈ ಬಾರಿ ಅಧಿಕಾರಿಗಳು ಮಾತ್ರ ಇದ್ದ ಸಭೆಯಲ್ಲಿ ಯಾವುದೇ ಚರ್ಚೆಗಳು ನಡೆಯಲಿಲ್ಲ. ಆಡಳಿತಾಧಿಕಾರಿ ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿದರು. ಸಾಮಾನ್ಯವಾಗಿ ನಗರ ಪಂಚಾಯತ್ ಸಭಾಭವನದಲ್ಲಿ ನಡೆಯುತ್ತಿದ್ದ ಬಜೆಟ್ ಮಂಡನಾ ಸಭೆ ಈ ಬಾರಿ ಆಡಳಿತಾಧಿಕಾರಿಗಳ ಚೇಂಬರ್ನಲ್ಲಿ ನಡೆಯಿತು. ಸಭಾಭವನದಲ್ಲಿ ಜನಗಣತಿ ಕುರಿತ ತರಬೇತಿ ನಡೆಯುತ್ತಿರುವ ಕಾರಣ ಚೇಂಬರ್ನಲ್ಲಿ ಬಜೆಟ್ ಸಭೆಸಿದ್ದೇವೆ ಎಂದು ಅಧಿಕಾರಿಗಳು ಹೇಳಿದರು. ಸಭೆಯಲ್ಲಿ ಅಧಿಕಾರಿಗಳು ಮಾತ್ರ ಇದ್ದರು.ಮಾಧ್ಯಮಗಳಿಗೂ ಮಾಹಿತಿ ನೀಡಿರಲಿಲ್ಲ. ವಿಷಯ ತಿಳಿದು ಕೆಲವೇ ಕೆಲವು ಮಂದಿ ಪತ್ರಕರ್ತರು ಆಗಮಿಸಿದ್ದರು.










