ಲಖನೌ: ವಿಶ್ವಕಪ್ ಕ್ರಿಕೆಟ್ನಲ್ಲಿ ಅಫ್ಗಾನಿಸ್ತಾನ ಮತ್ತು ನೆದರ್ಲೆಂಡ್ಸ್ ತಂಡಗಳು ಶುಕ್ರವಾರ ಮುಖಾಮುಖಿಯಾಗಲಿವೆ.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಘಟಾನುಘಟಿ ತಂಡಗಳಿಗೆ ಆಘಾತ ನೀಡಿರುವ ಎರಡು ತಂಡಗಳ ಮಧ್ಯೆ ಇಂದಿನ ಮುಖಾಮುಖಿ ನಡೆಯಲಿದೆ. ಉತ್ತಮ ಸ್ಪಿನ್ನರ್ಗಳು ಇರುವ ಅಫ್ಗಾನಿಸ್ತಾನ ತಂಡವು
ಗೆಲುವಿನ ನೆಚ್ಚಿನ ತಂಡವಾಗಿದೆ. ಆದರೆ ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡವನ್ನೇ ಮಣಿಸಿರುವ ನೆದರ್ಲೆಂಡ್ಸ್ ತಂಡವೂ ಗೆಲ್ಲುವ ಛಲದಲ್ಲಿದೆ. ಹಷ್ಮತ್ವುಲ್ಲಾ ಶಹೀದಿ ನಾಯಕತ್ವದ ಅಫ್ಗನ್ ತಂಡವು ಆಡಿರುವ ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಇದರಿಂದಾಗಿ ಆರನೇ ಸ್ಥಾನದಲ್ಲಿದೆ. ಸೆಮಿಫೈನಲ್ಗೆ ಪ್ರವೇಶಿಸುವ ಅಲ್ಪ ಅವಕಾಶವ ಇನ್ನೂ ಈ ತಂಡಕ್ಕೆ ಇದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಮಣಿಸಿ ಅಪಾರ ಆತ್ಮವಿಶ್ವಾಸದಲ್ಲಿ ಅಫ್ಗನ್ ತಂಡವಿದೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಎದುರು ಜಯಿಸಿರುವ ನೆದರ್ಲೆಂಡ್ಸ್ ತಂಡವು ಎಂಟನೇ ಸ್ಥಾನದಲ್ಲಿದೆ. ನಾಲ್ಕರ ಘಟ್ಟಕ್ಕೆ ಹೋಗುವ ಅವಕಾಶ ಈ ತಂಡಕ್ಕೆ ಕಡಿಮೆ ಇದೆ.
ತಂಡಗಳು:
ಅಫ್ಗಾನಿಸ್ತಾನ: ಹಷ್ಮತವುಲ್ಲಾ ಶಹೀದಿ (ನಾಯಕ) ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್ಕೀಪರ್) ಇಬ್ರಾಹಿಂ ಜದ್ರಾನ್ ರಿಯಾಜ್ ಹಸನ್ ರೆಹಮತ್ ಶಾ ನಜೀಬುಲ್ಲಾ ಜದ್ರಾನ್ ಮೊಹಮ್ಮದ್ ನಬಿ ಇಕ್ರಮ್ ಅಲಿಖಿಲ್ (ವಿಕೆಟ್ಕೀಪರ್) ಅಜ್ಮತ್ವುಲ್ಲಾ ಒಮರ್ಝೈ ರಶೀದ್ ಖಾನ್ ಮುಜೀಗವ ಉರ್ ರೆಹಮಾನ್ ನೂರ್ ಅಹಮದ್ ಫಜಲ್ಹಕ್ ಫಾರೂಕಿ ಅಬ್ದುಲ್ ರೆಹಮಾನ್ ನವೀನ್ ಉಲ್ ಹಕ್
ನೆದರ್ಲೆಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ–ವಿಕೆಟ್ಕೀಪರ್) ಕಾಲಿನ್ ಎಕರ್ಮನ್ ವೆಸ್ಲಿ ಬರೆಸಿ (ವಿಕೆಟ್ಕೀಪರ್) ಬಾಸ್ ಡಿ ಲೀಡೆ ಆರ್ಯನ್ ದತ್ತ ಸೈಬ್ರ್ಯಾಂಡ್ ಇಂಗೆಲ್ಬ್ರೆಚ್ ರಿಯಾನ್ ಕ್ಲೀನ್ ತೇಜಾ ನಿಡಮಾನೂರು ಮ್ಯಾಕ್ಸ್ ಒ ದೌಡ್ ಸಕೀಬ್ ಝುಲ್ಫಿಕರ್ ಶರೀಜ್ ಅಹಮದ್ ಲೊಗಾನ್ ವ್ಯಾನ್ ಬೀಕ್ ರೊಲಾಫ್ ವ್ಯಾನ್ ಡರ್ ಮರ್ವೆ ಪಾಲ್ ವ್ಯಾನ್ ಮೀಕೆರಾನ್ ವಿಕ್ರಂಜೀತ್ ಸಿಂಗ್
ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್









