ಸುಳ್ಯ:ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ನಡೆಯಿತು.ಕಾಲೇಜಿನ ಅಗದ ತಂತ್ರ, ಸ್ವಸ್ಥವೃತ್ತ ವಿಭಾಗದ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಉಪಾಧ್ಯಕ್ಷೆ ಶೋಭಾ ಚಿದಾನಂದ,ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ, ಸಂಸ್ಥೆಯ
ಬೋಧಕ ಹಾಗೂ ಭೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು,ಹಾಗೂ ಕಲಿಕಾ ವೈದ್ಯರುಗಳು ಉಪಸ್ಥಿತರಿದ್ದರು.
ತಂಬಾಕು ಸೇವನೆಯ ದುಷ್ಪರಿಣಾಮಗಳು,ಇದರಿಂದ ಉಂಟಾಗುವ ಕಾಯಿಲೆಗಳು ಹಾಗೂ ಸೇವನೆಯ ಚಟದಿಂದ ಹೊರಬರುವ ವಿಧಾನಗಳನ್ನು ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅಗದ ತಂತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಯಾದ ಡಾ. ಕೋಮಲ್ ಕಾಲೆ ಹಾಗೂ ದ್ವಿತೀಯ ವರ್ಷದ ಬಿ.ಎ.ಎಂ.ಎಸ್. ಕಲಿಕಾ ವಿದ್ಯಾರ್ಥಿಯಾದ ಭವಿತ್ ಶೆಟ್ಟಿ ಪ್ರಾತ್ಯಕ್ಷಿಕೆ ನೀಡಿದರು.
ದ್ವಿತೀಯ ಬಿ.ಎ.ಎಂ.ಎಸ್. ಕಲಿಕಾ ವಿದ್ಯಾರ್ಥಿಗಳಿಂದ ಕಾಲೇಜಿನ ಆವರಣದಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ನೀಲಾ ಎಂ. ಎ., ಇವರು ಪ್ರತೀಜ್ಞಾವಿಧಿ ಭೋಧಿಸಿದರು. ಚಿನ್ಮಯಿ ಪ್ರಾರ್ಥಿಸಿ, ಸ್ವಾತಿ ಆರ್ ಎನ್ ಸ್ವಾಗತಿಸಿ, ಸ್ನೇಹ ಕೆ ಸಿ ವಂದಿಸಿದರು.
ಸಂಪತ್ ಎಸ್ ಹೆಚ್ ಹಾಗೂ ಕುಮಾರಿ ದೀಕ್ಷಿತ ಎಂ ಎಸ್ ಕಾರ್ಯಕ್ರಮ ನಿರೂಪಿಸಿದರು.