ಸುಳ್ಯ: ಸುಳ್ಯದಿಂದ ಪ್ರಪಂಚದ ಅತ್ಯಂತ ಎತ್ತರದ ಪ್ರದೇಶ ಜಮ್ಮು ಕಾಶ್ಮೀರದ ಲಡಾಖ್ನ ಉಮ್ಮಿಂಗ್ ಲಾಗೆ ಮೊಟಾರು ಬೈಕಿನಲ್ಲಿ ತೆರಳಿದ ಸುಳ್ಯದ ಹಳೇಗೇಟಿನ ಹೋಂ ಗ್ಯಾಲರಿ ಮಾಲಕ ತೌಹೀದ್ ರಹ್ಮಾನ್ ಪತ್ನಿ ಜಸ್ಮಿಯ ಹಾಗೂ 3 ವರ್ಷ ಪ್ರಾಯದ ಪುತ್ರ ಜಸೀಲ್ ರಹ್ಮಾನ್ ಅವರನ್ನು ಸುಳ್ಯದ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ
ಸನ್ಮಾನಿಸಲಾಯಿತು. ಇವರು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ಗಿಂತ ಎತ್ತರದ ವಿಶ್ವದ ಅತೀ ಎತ್ತರದ ಮೋಟಾರ್ ಪಾಸ್ ಉಮ್ಮಿಂಗ್ಲಾ ಪಾಸ್ ಅನ್ನು ತಲುಪಿದ್ದರು. ಇವರ ಸಾಧನೆಯನ್ನು ಗುರುತಿಸಿ ಸುಳ್ಯದ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿ ಶಾಲು, ಹಾರ ಹಾಕಿ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಸುಳ್ಯ ನಗರ ಪಂಚಾಯತ್ ಮಾಜಿ ಅದ್ಯಕ್ಷರು ಕೆ.ಪಿ.ಸಿ.ಸಿ ಸಂಯೋಜಕರಾದ ಎಸ್.ಸಂಶುದ್ದೀನ್, ಮಲೆನಾಡು ಟ್ರಸ್ಟ್ ಇದರ ಗೌರವಾದ್ಯಕ್ಷ ಅಬ್ದುಲ್ ಹಮೀದ್ ಜನತಾ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಲೆನಾಡು ಟ್ರಸ್ಟ್ನ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್ , ನ.ಪಂ ಸದಸ್ಯರಾದ ಶರೀಫ್ ಕಂಠಿ, ಉದ್ಯಮಿಗಳಾದ ಸಿದ್ದೀಕ್ ಕೊಕ್ಕೊ, ಮನ್ಸೂರ್ ಮೆಟ್ರೊ, ತೌಹೀದ್ ರಹ್ಮಾನ್ ಪೋಷಕರಾದ ಹವೀದ್ ಕುರುಂಜಿ ದಂಪತಿಗಳು ಉಪಸ್ತಿತರಿದ್ದರು. ಶಾಹಿನ ಸುಳ್ಯ ಸ್ವಾಗತಿಸಿ, ಜಸ್ಮಿಯ ರವರನ್ನು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ಕಾರ್ಯಕ್ರಮವನ್ನು ಕೆ.ಬಿ.ಇಬ್ರಾಹಿಂ ನಿರೂಪಿಸಿ, ವಂದಿಸಿದರು, ಫರ್ಝೀನಾ ಸುಳ್ಯ ಸಹಕರಿಸಿದರು.









