ಅರಂತೋಡು:ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ವತಿಯಿಂದ 20 ನೇ ವರ್ಷದ ಸೌಹಾರ್ಧ ಇಪ್ತಾರ್ ಕೂಟವು ಮಾ.26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು. ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು.ನಿವೃತ್ತ
ಮುಖ್ಯೋಪಾಧ್ಯಾಯ ದಾಮೋದರ ಮಾಸ್ತರ್ ಗೂನಡ್ಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿದ್ದ ಅನ್ನ ಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ದ ಪುರುಷ ಮಠ ಮರ್ಕಂಜ ಇದರ ಧರ್ಮದರ್ಶಿ ರಾಜೇಶ್ ನಾಥ್ ಜಿ. ಸುಳ್ಯ ಬೀರಮಂಗಿಲ ಚರ್ಚ್ ಧರ್ಮಗುರುಗಳಾದ ವಿಕ್ಟರ್ ಡಿ’ಸೊಜ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಎಂ.ಮುಸ್ತಫಾ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅರೆಭಾಷೆ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಫ್ಪ ನಾಯ್ಕ್, ಫಾರೆಸ್ಟರ್ ಚಂದ್ರು, ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ, ಸುಳ್ಯ ತಾಲೂಕು ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು,ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಪ್ರಮುಖರಾದ ಎಸ್.ಸಂಶುದ್ದೀನ್, ಗೋಕುಲ್ ದಾಸ್, ಸುರೇಶ್ ಅಮೈ, ಭವಾನಿಶಂಕರ ಕಲ್ಮಡ್ಕ, ತೀರ್ಥರಾಮ ಪರ್ನೋಜಿ ಉಳುವಾರು, ಹಾಜಿ ಇಬ್ರಾಹಿಂ ಕತ್ತರ್, ಟಿ.ಎಂ ಜಾವೇದ್ ತೆಕ್ಕಿಲ್, ಟಿ.ಎಂ ಶಮೀರ್ ತೆಕ್ಕಿಲ್ , ಮೂಸ ಕುಂಞಿ ಪೈಂಬೆಚ್ಚಾಲ್, ಧೀರಾ ಕ್ರಾಸ್ತಾ, ಜಿ.ಕೆ.ಹಮೀದ್ ಗೂನಡ್ಕ, ಸಿದ್ಧೀಕ್ ಕೊಕ್ಕೊ, ಎಸ್ ಕೆ ಹನೀಫ್, ಹಮೀದ್ ಹಾಜಿ ಸುಳ್ಯ, ಕೆ.ಆರ್.ಪದ್ಮನಾಭ, ದಿನಕರ ಸಣ್ಣಮನೆ ಬದುರುದ್ದೀನ್ ಪಠೇಲ್, ಮೊದಲಾದವರು ಉಪಸ್ಥಿತರಿದ್ದರು.