ಗೂನಡ್ಕ: ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ ಇದರ 18 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಬ್ಲೋಸಮ್ 2024 ಸಮಾರಂಭ ತೆಕ್ಕಿಲ್ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಾರ್ಮೇಡ್ ಗ್ರೂಪ್ನ ಹಿರಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಉದ್ಘಾಟಿಸಿದರು. ಮಕ್ಕಳು ವಿದ್ಯಾಭಾಸದ ಕಡೆ ಗಮನ ಹರಿಸಿ ಓದುವ ಅಭ್ಯಾಸವನ್ನು ಬಾಲ್ಯದಲ್ಲಿಯೇ ರೂಡಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು
ಸ್ವಾವಲಂಬಿಗಳಾಗಬೇಕು ಎಂದರು. ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ,ಅಧ್ಯಕ್ಷತೆ ವಹಿಸಿದ್ದರು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿಮೇಲು ಬಹುಮಾನ ವಿತರಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ತರ್ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಸಂಪತ್ ವರದಿ ವಾಚಿಸಿದರು, ಮುಖ್ಯ ಅತಿಥಿಗಳಾಗಿ ಹಾಜಿ ಇಬ್ರಾಹಿಂ ಸೀ ಫುಡ್ ,ಸುಳ್ಯ ಬ್ಲಾಕ್ ಯೂತ್ ಕಾಂಗ್ರೇಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ಅನ್ಸಾರಿಯಾ ಯತೀಮ್ ಖಾನಾ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹನೀಫ್ ಎಸ್.ಕೆ ಸಂಪಾಜೆ, ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಸದಸ್ಯ ಜಗದೀಶ್ ರೈ ಕಲ್ಲುಗುಂಡಿ, ತೆಕ್ಕಿಲ್ ಶಾಲಾಭಿವ್ರದ್ಧಿ ಸಮಿತಿ ಅಧ್ಯಕ್ಷ ದಿನಕರ ಸಣ್ಣಮನೆ, ಹಾಜಿ ಪಿ.ಎ ಉಮ್ಮರ್, ತೆಕ್ಕಿಲ್ ಪ್ರತಿಷ್ಠಾನ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್, ತೆಕ್ಕಿಲ್ ಆಡಳಿತ ಮಂಡಳಿಯ ಗೌರವಾಧ್ಯಕ್ಷ ತಾಜ್ ಮೊಹಮ್ಮದ್ ಸಂಪಾಜೆ, ಅಧ್ಯಕ್ಷ ಉನೈಸ್ ಪೆರಾಜೆ, ಮೂಸಾ ಪೈಬಂಚ್ಚಾಲ್, ಸಿದ್ಧಿಕ್ ಕೊಕ್ಕೊ, ಸಾಜೀದ್ ಐ.ಜಿ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ತೆಕ್ಕಿಲ್ ಶಾಲೆಯಲ್ಲಿ ಸೇವೆ ಸಲ್ಲಿಸಿ ವಿವಿಧ ಕಾರಣಗಳಿಂದ ತೆರಳಿದ ಶಿಕ್ಷಕಿಯರಾದ ವಾಣಿ, ಉಷಲತಾ, ಧನ್ಯಶ್ರೀ, ಲೋಕೇಶ್ವರಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮಹನೀಯರಾದ ಡಾ. ಉಮ್ಮರ್ ಬೀಜದ ಕಟ್ಟೆ, ಹಮೀದ್ ಕುತ್ತಮೊಟ್ಟೆ, ಲತೀಫ್ ಹರ್ಲಡ್ಕ ಹಾಗೂ ನಿವ್ರತ್ತ ಶಿಕ್ಷಕ ದಾಮೋದರ ಮಾಸ್ತರ್ ಇವರುಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸಾಧಿಕ್ ಮಾಸ್ತರ್ ಕಲ್ಲುಗುಂಡಿ ಸ್ವಾಗತಿಸಿ, ಉನೈಸ್ ಪೆರಾಜೆ ವಂದಿಸಿದರು ಶಿಕ್ಷಕಿಯರಾದ ಸೌಮ್ಯ ಹಾಗೂ ಸುಭಾಶಿನಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿಧ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ಶ್ರೀಧರ್ ಅಡೂರು ಇವರಿಂದ ಮ್ಯಾಜಿಕ್ ಶೋ, ಕ್ಯಾಲಿಕಟ್ನ ಪ್ರಖ್ಯಾತ ಪಟ್ರುಮಾಲ್ ತಂಡದವರಿಂದ ಮ್ಯೂಸಿಕಲ್ ಪೆಸ್ಟ್ ರಸಮಂಜರಿ ಕಾರ್ಯಕ್ರಮ ನಡೆಯಿತು.









