ಗೂನಡ್ಕ: ಗೂನಡ್ಕದ ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯ 18ನೇ ವರ್ಷದ ಬ್ಲೋಸಂ -2024 ಶಾಲಾ ವಾರ್ಷಿಕೋತ್ಸವ ಸಮಾರಂಭ ಜ.7ರಂದು ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಟಿ ಎಂ ಶಹೀದ್ ತೆಕ್ಕಿಲ್ ಅವರು ವಹಿಸಲಿದ್ದಾರೆ. ಸಮಾರಂಭದವನ್ನು ತುಳು ಚಿತ್ರರಂಗದ ಹಾಸ್ಯ ನಟ ಅರವಿಂದ ಬೋಳಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಶ್ರಫ್ ಪಿ ಬಿ ಮತ್ತು ಶ್ರೀ ಅಬ್ದುಲ್ ರೆಹಮಾನ್ ಸಂಕೇಶ್ ಇವರು ಆಗಮಿಸಲಿದ್ದಾರೆ.ಈ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿ ವೇಲು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಫಾರ್ಮೆಡ್ ಹಿರಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರಾದ ಡಾ.ಉಮ್ಮರ್ ಬೀಜದ ಕಟ್ಟೆ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಗ್ರಾ.ಪಂ. ಉಪಾಧ್ಯಕ್ಷ ಹನೀಪ್.ಎಸ್.ಕೆ,

ಅಶ್ರಫ್ ಪಿ ಬಿ.
ವಲಯ ಸಂಪನ್ಮೂಲ ವ್ಯಕ್ತಿ ಮಮತ, ನಿವೃತ್ತ ಮುಖ್ಯೋಪಾಧ್ಯಾಯ
ದಾಮೋದರ ಮಾಸ್ಟರ್, ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ತಾಜ್ ಮಹಮ್ಮದ್, ಪಿ ಎ ಉಮ್ಮ ರ್ ಹಾಜಿ ಗೂನಡ್ಕ,ದಿನಕರ ಸಣ್ಣ ಮನೆ, ಅಶ್ರಪ್ ಗುಂಡಿ, ಜಿ ಕೆ ಹಮೀದ್ ಗೂನಡ್ಕ, ಜಾವೇದ್ ತೆಕ್ಕಿಲ್, ಯು ಬಿ ಚಕ್ರಪಾಣಿ, ಹಮೀದ್ ಕುತ್ತ ಮೊಟ್ಟೆ, ಲತೀಫ್ ಹರ್ಲಡ್ಕ,ಅಶ್ರಫ್ ಬಾಲಂಬಿ,ಇಬ್ರಾಹಿಂ ಹಾಜಿ, ಹಮೀದ್ ಹಾಜಿ ಬಿಳಿಯಾರು, ಸಜೀದ್ ಐ ಜಿ, ಸಲೀಂ ಪೆರಂಗೋಡಿ, ಆಲಿಹಾಜಿ, ಈ ಎಲ್ಲಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಶ್ರೀ ಶ್ರೀಧರ್ ಅಡೂರ್ ಇವರಿಂದ ಮ್ಯಾಜಿಕ್ ಶೋ ಹಾಗೂ ಸಂಜೆ ಕ್ಯಾಲಿಕಟ್ಟಿನ ಪ್ರಖ್ಯಾತ ಗಾಯಕರಿಂದ ಪಟ್ರುಮಾಲ್ ಮ್ಯಾಜಿಕಲ್ ಪೆಸ್ಟ್ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.









