ಸುಳ್ಯ:ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದ ಫಾತಿಮತ್ ಶಿಬಾ ಕಾಮರ್ಸ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದ
ರೌದ ಅಶ್ರಫ್ ತೆಕ್ಕಿಲ್ ಅವರನ್ನು
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ಸಂಶುದ್ದೀನ್, ಸವಾದ್, ನಾಸಿರ್ ಕಟ್ಟೆಕ್ಕಾರ್, ಫೈಸಲ್ ಕಟ್ಟೆಕ್ಕಾರ್, ಮನ್ಸೂರ್ ತೆಕ್ಕಿಲ್,ಮನ್ಸೂರ್ ಮೆಟ್ರೋ ಮೊದಲಾದವರು ಉಪಸ್ಥಿತರಿದ್ದರು
ಫಾತಿಮತ್ ಶಿಬಾ ಹನೀಫ್ ಕುಂಡಿಲ್ ರವರ ಪುತ್ರಿ, ರೌದ ಅಶ್ರಫ್ ತೆಕ್ಕಿಲ್ ರವರ ಪುತ್ರಿ