ಸುಳ್ಯ:ಸುಳ್ಯ ತಾಲ್ಲೂಕು ಕ್ರೀಡಾ ಕೂಟವನ್ನು ಯಶಸ್ವಿಯಾಗಿ ನಡೆಸಿದ ಸಂತ ಜೋಸೆಫ್ ಶಾಲೆಯ ವತಿಯಿಂದ ಸಹಕಾರ ನೀಡಿದ ವಿವಿಧ ಸಮಿತಿ ಸದಸ್ಯರಿಗೆ, ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಶಾಲಾ ಸಿಬ್ಬಂದಿಗಳಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು
ಶಾಲಾ ಸಂಚಾಲಕ ಫಾ.ವಿಕ್ಟರ್ ಡಿಸೋಜ ವಹಿಸಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಪೋಷಕರ ಸಂಘದ ಅಧ್ಯಕ್ಷ ಜೆ ಕೆ ರೈ, ಪ್ರೌಢ ಶಾಲಾ ಪೋಷಕರ ಸಂಘದ ಅಧ್ಯಕ್ಷ ಗುರುಸ್ವಾಮಿ, ದೈಹಿಕ ಶಿಕ್ಷಣಾಧಿಕಾರಿ ಸೂಫಿ ಪೆರಾಜೆ, ಮುಖ್ಯಶಿಕ್ಷಕರಾದ ಸಿಸ್ಟರ್ ಬಿನೋಮ, ಸಿಸ್ಟರ್ ಆಂಟನಿ ಮೇರಿ, ನಗರ ಪಂಚಾಯತ್ ಸದಸ್ಯ ಡೇವಿಡ್ ಕ್ರಾಸ್ತಾ, ನವೀನ್ ಮಚಾದೋ, ದೈಹಿಕ ಶಿಕ್ಷಕರಾದ ಕೊರಗಪ್ಪ, ಉಮೇಶ್, ಪುಷ್ಪ ವೇಣಿ, ನಿಹಾಲ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಕ್ಯೋಪಾಧ್ಯಾಯಿನಿ ಸಿ ಬಿನೋಮ ಸ್ವಾಗತಿಸಿ ಪುಷ್ಪವೇಣಿ ವಂದಿಸಿದರು, ಉಮೇಶ್ ಕಾರ್ಯಕ್ರಮ ನಿರೂಪಿಸಿದರು.