ಅಡ್ಕಾರ್:ದ.ಕ.ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳು ವಿನೂಬನಗರ ಇದರ ಸಹಭಾಗಿತ್ವದಲ್ಲಿ ವಿನೂಬನಗರ ವಿದ್ಯಾಸಂಸ್ಥೆಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 8 ವೇದಿಕೆಗಳಲ್ಲಿ 49 ಸ್ಪರ್ಧೆಗಳು ನಡೆಯುತ್ತಿದೆ. ಮೊದಲ ದಿನ 8 ವೇದಿಕೆಗಳಲ್ಲಿ
25 ಸ್ಪರ್ಧೆಗಳು, ಎರಡನೇ ದಿನ 7 ವೇದಿಕೆಗಳಲ್ಲಿ 24 ಸ್ಪರ್ಧೆಗಳು ನಡೆಯಲಿದೆ. ನ.13ರಂದು ವೇದಿಕೆ ಒಂದರಲ್ಲಿ ಭರತ ನಾಟ್ಯ, ಗಝಲ್, ಭಾವಗೀತೆ, ಜಾನಪದ ಗೀತೆ, ವೇದಿಕೆ ಎರಡಲ್ಲಿ ಚಿತ್ರಕಲೆ, ವೇದಿಕೆ 3ರಲ್ಲಿ ಪ್ರಬಂಧ ರಚನೆ, ವೇದಿಕೆ 4ರಲ್ಲಿ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ತುಳು ಭಾಷಣ, ವೇದಿಕೆಯಲ್ಲಿ ಅರೇಬಿಕ್ ಭಾಷಣ, ವೇದಿಕೆ 6ರಲ್ಲಿ ಆಶುಭಾಷಣ, ಕನ್ನಡ ಭಾಷಣ, ಕನ್ನಡ ಕಂಠಪಾಠ, ವೇದಿಕೆ 7ರಲ್ಲಿ ಮಿಮಿಕ್ರಿ, ಛದ್ಮವೇಷ, ವೇದಿಕೆ 8ರಲ್ಲಿ ರಂಗೋಲಿ, ಕ್ಲೇ ಮಾಡಲಿಂಗ್ ನಡೆಯುತಿದೆ.
ನ.14ರಂದು 7 ವೇದಿಕೆಯಲ್ಲಿ ಸ್ಪರ್ಧೆಗಳು ನಡೆಯುತಿದೆ. ವೇದಿಕೆ ಒಂದರಲ್ಲಿ ಕಥೆ ಹೇಳುವುದು, ಕವ್ವಾಲಿ, ಜಾನಪದ ನೃತ್ಯ,ವೇದಿಕೆ 2ರಲ್ಲಿ ಅಭಿನಯ ಗೀತೆ, ಕವನ ಪದ್ಯ ವಾಚನ, ಕಥೆ ಹೇಳುವುದು, ವೇದಿಕೆ 3ರಲ್ಲಿ ಆಶು ಭಾಷಣ, ಕವನ ಪದ್ಯ ವಾಚನ, ಅಭಿನಯ ಗೀತೆ, ವೇದಿಕೆ 4ರಲ್ಲಿ ಸಂಸ್ಕೃತ ಧಾರ್ಮಿಕ ಪಠಣ, ಸಂಸ್ಕೃತ ಭಾಷಣ, ಸಂಸ್ಕೃತ ಕಂಠಪಾಠ, 5ನೇ ವೇದಿಕೆಯಲ್ಲಿ ಇಂಗ್ಲೀಷ್ ಕಂಠಪಾಠ, ಇಂಗ್ಲೀಷ್ ಭಾಷಣ, ವೇದಿಕೆ 6ರಲ್ಲಿ ಆಶುಭಾಷಣ, ಹಿಂದಿ ಕಂಠಪಾಠ, ಹಿಂದಿ ಭಾಷಣ, ವೇದಿಕೆ 7ರಲ್ಲಿ ಭಕ್ತಿಗೀತೆ, ದೇಶಭಕ್ತಿಗೀತೆ, ಸ್ಪರ್ಧೆಗಳು ನಡೆಯಲಿದೆ.