ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನಲ್ಲಿ ಟೆನ್ನಿಸ್ ಹಾಗೂ ಸ್ಕ್ವಾಶ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿದೆ. ಕರ್ನಾಟಕದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಏಶ್ಯನ್ ಗೇಮ್ಸ್ ಮಿಶ್ರ ಡಬಲ್ಸ್ನಲ್ಲಿ ಚಿನ್ನದ
ಪದಕ ಗೆದ್ದಿದ್ದಾರೆ.ಶನಿವಾರ ನಡೆದ ಫೈನಲ್ನಲ್ಲಿ ಭಾರತೀಯ ಜೋಡಿ ಚೈನೀಸ್ ತೈಪೆ ಜೋಡಿ ವಿರುದ್ಧ 2-6 6-3 (10)-(4) ಅಂತರದಲ್ಲಿ ರೋಚಕವಾಗಿ ಗೆಲುವು ಸಾಧಿಸಿತು. ಏಶ್ಯನ್ ಗೇಮ್ಸ್ನ ಸ್ಕ್ವಾಶ್ನಲ್ಲಿ ಭಾರತದ ಪುರುಷರ ತಂಡ ಐತಿಹಾಸಿಕ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಶನಿವಾರ ನಡೆದ ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿ ಬಂಗಾರ ಪಡೆಯಿತು.