ಸುಳ್ಯ:ಸುಳ್ಯದ ಟೀಮ್ ಜಟಾಯು ವತಿಯಿಂದ ಮೇನಾಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಎಜ್ಯುಕೇಷನ್ ಕಿಟ್ ವಿತರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಟೀಮ್ ಜಟಾಯು ತಂಡದ

ಆಶಿತ್ , ಜೀವಿತ್, ಪೃಥ್ವಿ ಕುಮಾರ್, ಲಿಖಿತ್, ನಿತೀಶ್,ಧೀರಜ್, ಪ್ರಮುಖ್, ಭವಿತ್ ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ಕನಕ, ಶಾಲಾ ಸಿಬ್ಬಂದಿಗಳು, ಮಕ್ಕಳು ಭಾಗವಹಿಸಿದ್ದರು. ಪೃಥ್ವಿಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾ ಮುಖ್ಯ ಶಿಕ್ಷಕರು ವಂದಿಸಿದರು. ಟೀಮ್ ಜಟಾಯು ತಂಡ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.









