ನ್ಯೂಯಾರ್ಕ್: ವಿಶ್ವಕಪ್ ಟಿ20 ಪಂದ್ಯದಲ್ಲಿ ಇಂದು ಭಾರತ ಮತ್ತು ಅಮೆರಿಕ ತಂಡಗಳು ಮುಖಾಮುಖಿಯಾಗಲಿವೆ.
ಭಾರತೀಯ ಮೂಲದವರೇ ತುಂಬಿರುವ ಅಮೇರಿಕ ತಂಡದ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ Vs ಮಿನಿ ಇಂಡಿಯಾ ಎಂದೇ ವಿಶ್ಲೇಷಿಸಲಾಗುತಿದೆ.ಆತಿಥೇಯ ತಂಡದಲ್ಲಿ ಆರು ಮಂದಿ ಭಾರತೀಯ ಆಟಗಾರರೇ ಇದ್ದಾರೆ. 15 ಮಂದಿಯ ಅಮೇರಿಕ ತಂಡದಲ್ಲಿ
9 ಮಂದಿ ಭಾರತೀಯ ಮೂಲದವರು. ಪ್ಲೇಯಿಂಗ್ ಇಲೆವೆನ್ನಲ್ಲಿ ನಾಯಕ ಮೊನಾಂಕ್ ಪಟೇಲ್ ಸೇರಿ 6 ಮಂದಿ ಭಾರತೀಯರು.
ಉಭಯ ತಂಡಗಳು ಎ ಗುಂಪಿನಲ್ಲಿ ತಲಾ 4 ಅಂಕಗಳೊಂದಿಗೆ ಮೊದಲೆರಡು ಸ್ಥಾನಗಳಲ್ಲಿವೆ. ತನಗಿಂತ ಬಲಿಷ್ಠ ಹಾಗೂ ಅನುಭವಿ ಪಾಕಿಸ್ತಾನ ತಂಡವನ್ನು ಹಣಿದಿರುವ ಹುಮ್ಮಸ್ಸಿನಲ್ಲಿರುವ ಅಮೆರಿಕ ತಂಡವು ರೋಹಿತ್ ಶರ್ಮಾ ಬಳಗಕ್ಕೆ ಸವಾಲೊಡ್ಡಲು ಸಿದ್ಧವಾಗಿದೆ.
ಬೌಲರ್ಗಳ ಸ್ವರ್ಗವಾಗಿರುವ ಅಮೆರಿಕದ ಪಿಚ್ಗಳಲ್ಲಿ ಫಲಿತಾಂಶ ಅನಿಶ್ಚಿತ. ಕಳೆದೆರಡೂ ಪಂದ್ಯಗಳನ್ನು ಭಾರತಕ್ಕೆ ಜಯಿಸಿಕೊಟ್ಟಿದ್ದು ಬೌಲರ್ಗಳು. ಅದರಲ್ಲೂ ಜಸ್ಪ್ರೀತ್ ಬೂಮ್ರಾ ಅವರ ಮಾರಕ ಸ್ಪೆಲ್. ಹಾರ್ದಿಕ್, ಅಕ್ಷರ್ ಪಟೇಲ್, ಆರ್ಷದೀಪ್ ಸಿಂಗ್ ಹಾಗೂ ಸಿರಾಜ್ ಅವರನ್ನು ಎದುರಿಸುವುದು ಅಮೆರಿಕ ತಂಡಕ್ಕೆ ಕಠಿಣ ಸವಾಲಾಗಬಹುದು.ಭಾರತದ ಬ್ಯಾಟರ್ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ.ಆತಿಥೇಯ ತಂಡದ ಸ್ಪಿನ್ನರ್, ಕನ್ನಡಿಗ ನಾಸ್ತುಷ್ ಕೆಂಜಿಗೆ, ಸೌರಭ್ ನೇತ್ರಾವಳ್ಕರ್ ಅವರೂ ಭಾರತದ ಬ್ಯಾಟರ್ಗಳಿಗೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ) ಹಾರ್ದಿಕ್ ಪಾಂಡ್ಯ ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್ ರಿಷಭ್ ಪಂತ್ (ವಿಕೆಟ್ಕೀಪರ್) ಸಂಜು ಸ್ಯಾಮ್ಸನ್ ಶಿವಂ ದುಬೆ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಕುಲದೀಪ್ ಯಾದವ್ ಯಜುವೇಂದ್ರ ಚಾಹಲ್ ಅರ್ಷದೀಪ್ ಸಿಂಗ್ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್.
ಅಮೆರಿಕ: ಮೊನಾಂಕ್ ಪಟೇಲ್ (ನಾಯಕ) ಆ್ಯರನ್ ಜೋನ್ಸ್, ಆ್ಯಂಡ್ರಿಸ್ ಗೌಸ್, ಕೋರಿ ಆ್ಯಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್ ನಾಸ್ತುಷ್ ಕೆಂಜಿಗೆ, ಸೌರಭ್ ನೇತ್ರಾವಳ್ಕರ್, ಶ್ಯಾಡ್ಲಿ ವ್ಯಾನ್, ಶಲೈವಕ್ ಸ್ಟೀವನ್ ಟೇಲರ್ ಶಯಾನ್ ಜಹಾಂಗಿರ್.
ಪಂದ್ಯ ಆರಂಭ:ರಾತ್ರಿ 8 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಡಿಡಿ ಸ್ಪೋರ್ಟ್ಸ್ ಹಾಟ್ಸ್ಟಾರ್ ಆ್ಯಪ್.