ಸುಳ್ಯ:ಹಿರಿಯ ಸಾಮಾಜಿಕ ಕಾರ್ಯಕರ್ತ, ಸಾಹಿತ್ಯ ಸಂಘಟಕ, ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಯುವ ಸಾಧಕ ಡಾ. ಉಮ್ಮರ್ ಬೀಜದಕಟ್ಟೆ ಯವರನ್ನು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಯೆನಪೋಯ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್(ಮಾನವಿಕತೆ ಮತ್ತು ಸಮಾಜ ವಿಜ್ಞಾನ ಅಭಿವೃದ್ಧಿ ವಿಭಾಗದ ಸದಸ್ಯರಾಗಿ,ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ
ಅಧ್ಯಕ್ಷರಾಗಿ, ಈಶ್ವರಮಂಗಲದ ಮಧುರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಇದರ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಸಂಪಾಜೆ ಗ್ರಾಮದ ಗೂನಡ್ಕದ ಸಜ್ಜನ ಸಭಾಭವನದಲ್ಲಿ ನಡೆದ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯಶಸ್ವಿ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.

ಇವರು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಅಲ್ಲದೇ ಅನೇಕ ಸಾಮಾಜಿಕ,ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನೂ ತಾನು ತೊಡಗಿಸಿಕೊಂಡಿದ್ದಾರೆ. ಕೊರೊನ ಮತ್ತು ನೆರೆ ಪಿಡಿತ ಸಂದರ್ಭದಲ್ಲಿ ತಮ್ಮ ಸಭಾಂಗಣವನ್ನು ನಿರಾಶ್ರಿತರಿಗೆ ಒದಗಿಸಿ ಕೊಡುವುದರೊಂದಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಸಿದರು, ಹಲವಾರು ಶಾಲೆ, ಅಂಗನವಾಡಿ, ಇನ್ನಿತರ ಸಂಘ ಸಂಸ್ಥೆಗಳಿಗೆ ಪೋಷಕರಾಗಿ ಸಹಕರಿಸುತ್ತಿದ್ದಾರೆ.
ಡಾ. ಉಮ್ಮರ್ ಬೀಜದಕಟ್ಟೆಯವರು ಮೂಲತಃ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕದ ಬೀಜದಕಟ್ಟೆ ಯವರಾಗಿದ್ದು, ಕಳೆದ 23 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಔಷಧಿ ಕಂಪನಿಯಾದ ಫಾರ್ಮೆಡ್ ಗ್ರೂಪ್ ನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ









