ಸುಳ್ಯ: ಇಂದು ಪ್ರಕಟಗೊಂಡ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸುಳ್ಯ ತಾಲೂಕಿನಲ್ಲಿ ಶೇ. 96.83 ಫಲಿತಾಂಶ ದಾಖಲಾಗಿದೆ.
36 ಪ್ರೌಢ ಶಾಲೆಗಳ 1766 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1710 ವಿದ್ಯಾರ್ಥಿಗಳು ಉತ್ತೀರ್ಣರಾಗಿಶೇ. 96.83 ಫಲಿತಾಂಶ ಬಂದಿದೆ. ಖಾಸಗೀಯಾಗಿ ಪರೀಕ್ಷೆ ಬರೆದ
ವಿದ್ಯಾರ್ಥಿಗಳು ಸೇರಿ ತಾಲೂಕಿನಲ್ಲಿ 1901 ವಿದ್ಯಾರ್ಥಿಗಳು ಪರೀಕ್ಷೆ ಬರೆದು 1757 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ
92.43 ಫಲಿತಾಂಶ ಬಂದಿದೆ.
18 ಶಾಲೆಗಳಿಗೆ ಶೇ.100 ಫಲಿತಾಂಶ:
ತಾಲೂಕಿನ 18 ಪ್ರೌಢ ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ.
ಸರಕಾರಿ ಶಾಲೆಗಳ ಪೈಕಿ ಸರಕಾರಿ ಪದವಿ ಪೂರ್ವ ಕಾಲೇಜು ಹರಿಹರ ಪಳ್ಳತ್ತಡ್ಕ, ಸರಕಾರಿ ಪ್ರೌಢ ಶಾಲೆ ಮರ್ಕಂಜ, ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ, ಸರಕಾರಿ ಪ್ರೌಢ ಶಾಲೆ ಎಡಮಂಗಲ, ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು, ಮೊರಾರಗಜಿ ದೇಸಾಯಿ ವಸತಿ ಶಾಲೆ ಪಂಜ.
ಅನುದಾನಿತ ಶಾಲೆಗಳ ಪೈಕಿ ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ, ಶ್ರೀ ಶಾರದಾ ಪದವಿಪೂರ್ವ ಕಾಲೇಜು (ಶ್ರೀ ಶಾರದಾ ಹೆಣ್ಣುಮಕ್ಕಳಪ್ರೌಢ ಶಾಲೆ) ಸುಳ್ಯ ಶೇ.100 ಫಲಿತಾಂಶ ದಾಖಲಿಸಿದೆ.
ಅನುದಾನ ರಹಿತ ಶಾಲೆಗಳಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಸುಳ್ಯ, ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸುಬ್ರಹ್ಮಣ್ಯ, ಸ್ನೇಹ ಪ್ರೌಢ ಶಾಲೆ ಪರಿವಾರಕಾನ, ಸವೇರಪುರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಲ್ಲುಗುಂಡಿ, ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಜಟ್ಟಿಪಳ್ಳ, ಕೆ.ಎಸ್.ಜಿ.ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನಿಂತಿಕಲ್ಲು, ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು, ಜ್ಞಾನ ದೀಪ ಪ್ರೌಢ ಶಾಲೆ ಎಲಿಮಲೆ, ವಿವೇಕಾನಂದ ಪ್ರೌಢ ಶಾಲೆ ವಿನೋಬನಗರ ಜಾಲ್ಸೂರು, ತೆಕ್ಕಿಲ್ ಪ್ರೌಢ ಶಾಲೆ ಗೂನಡ್ಕ ಶೇ.100 ಫಲಿತಾಂಶ ದಾಖಲಿಸಿದೆ.