ಸುಳ್ಯ: ಸುಳ್ಯದಲ್ಲಿ ಸೆ.8ರಂದು ಭರ್ಜರಿ ಮಳೆಯಾಗಿದೆ. ಶುಕ್ರವಾರ ಮಧ್ನಾಹ್ನದ ಬಳಿಕ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಉತ್ತಮ ಮಳೆ ಸುರಿದಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿದಿದೆ.
ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಮುಂಗಾರು ದುರ್ಬಲವಾಗಿ ಮುಂದುವರಿದಿದ್ದು ಇದೀಗ ಮತ್ತೆ ಚುರುಕಾಗುವ ಲಕ್ಷಣ ಕಂಡು ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.









