ಸುಳ್ಯ:ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ ಅ.9 ರಿಂದ ಅ.17ರ ತನಕ ಶ್ರೀ ಚೆನ್ನಕೇಶವದ ದೇವಸ್ಥಾನದ ಮುಂಭಾಗದ ಶಾರದಾಂಬಾ ಕಲಾ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಒಂಭತ್ತು ದಿನಗಳ ಕಾಲ ವಿವಿಧ
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಅದ್ದೂರಿಯಾಗಿ ನಡೆಯಲಿದೆ.
ಅ.9ರಂದು ಬೆಳಿಗ್ಗೆ 9ಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ ನಡೆದು 10.17ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯಲಿದೆ. ಸಂಜೆ 3 ರಿಂದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಕುಣಿತ ಭಜನೆಯೊಂದಿಗೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ.ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಬಳಿಕ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.
ಅ.10ರಂದು ಸಂಜೆ 7ರಿಂದ ನಾಟ್ಯ ನಿಲಯಂ ಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ಹಾಗು ಶಿಷ್ಯ ವೃಂದದವರಿಂದ ನೃತ್ಯ ಸಂಕಲ್ಪಂ.
ಅ.11ರಂದು ಪೂ.9 ರಿಂದ ಭಜನೋತ್ಸವ ನಡೆಯಲಿದೆ. ಸಂಜೆ 7 ರಿಂದ ಸಾಂಸ್ಕೃತಿಕ ವೈಭವ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ಅ.12 ರಂದು ಬೆಳಿಗ್ಗೆ 6.30ರಿಂದ ಆಯುಧ ಪೂಜೆ ಬೆಳಿಗ್ಗೆ 9ರಿಂದ ಮಹಿಳಾ ದಸರ ನಡೆಯಲಿದೆ. ಇದರ ಅಂಗವಾಗಿ ತಾಲೂಕಿನ ಮಹಿಳೆಯರು ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳು, ಗೃಹ ತಯಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಮಹಿಳೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ
ಸಂಜೆ 7ರಿಂದ ಭರತನಾಟ್ಯ ನೃತ್ಯ ವೈಭವ ‘ಅಷ್ಠಲಕ್ಷ್ಮಿ, ರಾತ್ರಿ 9ರಿಂದ ಮಹಿಳಾ ಯಕ್ಷಗಾನ ಶ್ರೀದೇವಿ ಮಹಿಷಮರ್ದಿನಿ ನಡೆಯಲಿದೆ.
ಅ.13 ರಂದು ಬೆಳಿಗ್ಗೆ 6.22ರಿಂದ ಪುಟಾಣಿಗಳಿಗೆ ಅಕ್ಷರಾಭ್ಯಾಸ. ಬೆಳಿಗ್ಗೆ 9ರಿಂದ ಮಕ್ಕಳ ದಸರಾ ನಡೆಯಲಿದೆ. ಇದರ ಅಂಗವಾಗಿ ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಮಕ್ಕಳ ಮೆರವಣಿಗೆ ನಡೆಯಲಿದೆ. ಬಳಿಕ ಮಕ್ಕಳ ಸಾಂಸ್ಕೃತಿಕ ವೈಭವ. ಸಂಜೆ 7.30ರಿಂದ ಡಾನ್ಸ್ ಡಾನ್ಸ್ ಕಾರ್ಯಕ್ರಮ ನಡೆಯಲಿದೆ.
ಅ.14ರಂದು ಸಂಜೆ 7 ರಿಂದ ವಿಜಯಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ ಕನ್ನಡ ನಾಟಕ ‘ಮಣಿಕಂಠ ಮಹಿಮೆ’ ಪ್ರಸ್ತುತಿಗೊಳ್ಳಲಿದೆ.
ಅ.15ರಂದು ಸಂಜೆ 6ರಿಂದ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ಮತ್ತು ಅಷ್ಟಾವಧಾನ ಸೇವೆ ಹಾಗೂ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.
ಅ.16 ರಂದು ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ. 7.30ರಿಂದ ಚಲನಚಿತ್ರ ಹಿನ್ನಲೆ ಗಾಯಕ ಸರಿಗಮಪ ವಿಜೇತ ದರ್ಶನ್ ನಾರಾಯಣ್ ನೇತೃತ್ವದಲ್ಲಿ ಜನಪ್ರಿಯ ಗಾಯಕರೊಂದಿಗೆ ಸಂಗೀತ ರಸಮಂಜರಿ ಸಂಗೀತ ಸೌರಭ ಕಾರ್ಯಕ್ರಮ ನಡೆಯಲಿದೆ.
ಅ.17ರಂದು ಶ್ರೀ ಶಾರದಾ ದೇವಿಯ ವಿಜ್ರಂಭಣೆಯ ಶೋಭಾ ಯಾತ್ರೆಯೊಂದಿಗೆ ಸುಳ್ಯ ದಸರಾ ಉತ್ಸವ ಸಂಪನ್ನಗೊಳ್ಳಲಿದೆ.
ಸುಳ್ಯದಲ್ಲಿ 1972ರಲ್ಲಿ ಪ್ರಾರಂಭಗೊಂಡು ಕಳೆದ 52 ವರ್ಷಗಳಿಂದ ವಿಜೃಂಭಣೆಯಿಂದ ನಡೆಸಲ್ಪಡುವ ಶ್ರೀ ಶಾರದಾಂಬ ದಸರಾ ಉತ್ಸವವು ಈ ಬಾರಿ ಮೈಸೂರು, ಮಡಿಕೇರಿ ಹಾಗೂ ಮಂಗಳೂರು ದಸರಾ ಮಾದರಿಯಲ್ಲಿ ವಿಜೃಂಭಣೆಯಿಂದ ನಡೆಸಲು ಎಲ್ಲಾ ಸಿದ್ಧತೆ ಮಾಡಲಾಗಿದೆ.
ಎಂದು ಶ್ರೀ ಶಾರದಾಂಬ ದಸರಾ ಸಮೂಹ ಸಮಿತಿಯ ಪದಾಧಿಕಾರಿಗಳಾದ ನಾರಾಯಣ ಕೇಕಡ್ಕ, ಡಾ.ಡಿ.ವಿ.ಲೀಲಾಧರ್, ಕೆ. ಗೋಕುಲ್ದಾಸ್, ಕೆ. ಕೃಷ್ಣ ಕಾಮತ್ ಅರಂಬೂರು, ಅಶೋಕ್ ಪ್ರಭು, ಸಂತೋಷ್ ಕುತ್ತಮೊಟ್ಟೆ, ಬೂಡು ರಾಧಾಕೃಷ್ಣ ರೈ, ರಾಜು ಪಂಡಿತ್ ತಿಳಿಸಿದ್ದಾರೆ.