ಸುಳ್ಯ: ಅ.17ರಂದು ನಡೆಯುವ 53ನೇ ವರ್ಷದ ಶಾರದೋತ್ಸವ ಸುಳ್ಯ ದಸರಾ ಕಾರ್ಯಕ್ರಮದ ಶ್ರೀ ಶಾರದಾ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯ ಸಂದರ್ಭದಲ್ಲಿ ಸುಳ್ಯದಲ್ಲಿ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಿ ದ.ಕ.ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ವಿಸರ್ಜನಾ ಮೆರವಣಿಗೆಯು ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯಿಂದ
ಹೊರಟು ವಿವೇಕಾನಂದ ಸರ್ಕಲ್ – ಶ್ರೀ ರಾಮ್ ಪೇಟೆ – ಮೊಗರ್ವಣೆ – ಹಳೇಗೇಟ್ – ಒಡಬಾಯಿ ವೆಟ್ರೋಲ್ ಪಂವ್ ಬಳಿಯಿಂದ ವಾಪಾಸ್ಸು ಹಿಂತಿರುಗಿ ಜ್ಯೋತಿ ಸರ್ಕಲ್ – ಬಸ್ ನಿಲ್ದಾಣ – ಕಟ್ಟೆ ಜಂಕ್ಷನ್ – ಗಾಂಧಿನಗರ ತೆರಳಿ ಬಳಿಕ ರಥಬೀದಿಯಿಂದಾಗಿ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿರುವ ವಯಸ್ವಿನಿ ನದಿಯಲ್ಲಿ ವಿಸರ್ಜನೆ ನಡೆಯಲ್ಲಿರುತ್ತದೆ.
ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸೇರುವ ಸಾಧ್ಯತೆ ಇರುವುದರಿಂದ ಅ.17ರಂದು ಸಂಜೆ 3.ಗಂಟೆಯಿಂದ ಮಧ್ಯರಾತ್ರಿವರೆಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ – 275 ರಲ್ಲಿ ಸಂಚರಿಸುವ ವಾಹನಗಳನ್ನು ಕಟ್ಟೆ ಜಂಕ್ಷನ್ ನಿಂದ – ವಿವೇಕಾನಂದ ಸರ್ಕಲ್ – ಕಾಂತಮಂಗಲ – ಅಜ್ಜಾವರ- ಪೇರಾಲು ಅಡ್ಕಾರ್ ಮಾರ್ಗವಾಗಿ ಅಡ್ಡಾರ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ – 275 ನ್ನು ಸಂಪರ್ಕಿಸುವಂತೆ ಸೂಚಿಸಿ ಆದೇಶ ಹೊರಡಿಸಲಾಗಿದೆ.