ಸುಳ್ಯ:ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಸಿಎ ಬ್ಯಾಂಕ್)ದ ವತಿಯಿಂದ ಸಹಕಾರಿ ಆಫ್ ಬಿಡುಗಡೆ, ಕೃಷಿಕರ ಮತ್ತು ವ್ಯಾಪಾರಸ್ಥರ ಓವರ್ ಡ್ರಾಪ್ಟ್ ಸಾಲಗಳ ಬಿಡುಗಡೆ, ಬಾಡಿಗೆಗೆ ಔಷಧ ಸಿಂಪಡಿಸುವ ಯಂತ್ರ ಮತ್ತು ಕಾರ್ಬನ್ ದೋಟಿ ಉದ್ಘಾಟನಾ ಕಾರ್ಯಕ್ರಮ ಫೆ.25ರಂದು ಬ್ಯಾಂಕ್ನ ಸಭಾಂಗಣದಲ್ಲಿ ನಡೆಯಿತು.
ನೂತನ
ಸಹಕಾರಿ ಆಪ್,ಸಾಲ ಯೋಜನೆ, ಕೃಷಿಕರ ಓವರ್ ಡ್ರಾಪ್ಟ್, ವ್ಯಾಪಾರಸ್ಥರ ಓವರ್ ಡ್ರಾಪ್ಟ್, ಚಿನ್ನ ಖರೀದಿ ಸಾಲ, ಶೇ.1ರ ದರದಲ್ಲಿ ರಸಗೊಬ್ಬರ ಖರೀದಿ ಸಾಲ ಯೋಜನೆಗಳಿಗೆ ಅತಿಥಿಗಳು ಚಾಲನೆ ನೀಡಿದರು.
ಎಂ.ಬಿ.ಫೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ, ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಕೆ.ಉಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ.ವಿ.ಅಡ್ಪಂಗಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ.ಟಿ, ನ.ಪಂ.ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕಿರಿ, ಭಾಸ್ಕರ ರಾವ್ ಬಯಂಬು,ಎ.ಎಸ್.ಮನ್ಮಥ, ಜಯರಾಮ ಮುಂಡೋಳಿಮೂಲೆ, ಪುರುಷೋತ್ತಮ ಅಡ್ಪಂಗಾಯ, ಮಣಿಕಂಠ ಹಾಸ್ಪಾರೆ, ಬಾಲಕೃಷ್ಣ ನೆಡ್ಚಿಲ್,

ಬ್ಯಾಂಕ್ನ ಉಪಾಧ್ಯಕ್ಷ ಚಂದ್ರಶೇಖರ ನಡುಮನೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಎಸ್.ಪಿ, ನಿರ್ದೇಶಕರಾದ ಬಾಲಗೋಪಾಲ ಎಂ. ಸೇರ್ಕಜೆ, ಹೇಮಂತ್ ಕೆ.ಆರ್.ಕಂದಡ್ಕ, ಪ್ರಬೋದ್ ಶೆಟ್ಟಿ ಮೇನಾಲ, ವೆಂಕಟ್ರಮಣ ಮುಳ್ಯ, ಚಂದ್ರಶೇಖರ ದೊಡ್ಡೇರಿ, ವಾಸುದೇವ ನಾಯಕ್.ಪಿ., ಕೇಶವ ಸಿ.ಎ, ಶಿವರಾಮ.ಕೆ, ನವ್ಯ ಎ.ಸಿ, ಚಂದ್ರಶೇಖರ ಡಿ.ಕೆ, ಹರಿಣಾಕ್ಷಿ, ಬಿ.ಉಪಸ್ಥಿತರಿದ್ದರು.
ಬ್ಯಾಂಕ್ನ ಉಪಾಧ್ಯಕ್ಷ ಚಂದ್ರಶೇಖರ ನಡುಮನೆ ಸ್ವಾಗತಿಸಿ, ನಿರ್ದೇಶಕರಾದ ಬಾಲಗೋಪಾಲ ಎಂ.ಸೇರ್ಕಜೆ ವಂದಿಸಿ, ಹೇಮಂತ್ ಕೆ.ಆರ್ ಕಾರ್ಯಕ್ರಮ ನಿರೂಪಿಸಿದರು.







