ಸುಳ್ಯ:ಸುಳ್ಯ ತಾಲೂಕು ರಚನೆಗೊಂಡು 60 ವರ್ಷ ಪೂರ್ತಿಯಾಗಿರುವ ಹಿನ್ನಲೆಯಲ್ಲಿ ‘ಸುಳ್ಯಕ್ಕೆ 60 ವರ್ಷ’ ಸಂಭ್ರಮಾಚರಣೆ ಜನವರಿ 21ರಂದು ನಡೆಸಲು ನಿರ್ಧರಿಸಲಾಗಿದೆ.ಸುಳ್ಯ ತಾಲೂಕು ಆಡಳಿತ, ಪ್ರಮುಖರ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧರ ಕೈಗೊಳ್ಳಲಾಯಿತು. ತಹಶೀಲ್ದಾರ್ ಮಂಜುಳ ಎಂ. ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲೂಕು
ಬೆಳೆದು ಬಂದ ಹಾದಿ ಹಾಗೂ ಸುಳ್ಯದ ವಿಶೇಷತೆ ಬಗ್ಗೆ ಬೆಳಕು ಚೆಲ್ಲುವ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಆಕರ್ಷಕ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮಗಳೊಂದಿಗೆ ಸಂಭ್ರಮಾಚರಣೆ ನಡೆಯಲಿದೆ. ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಸಮಾರಂಭದ ಅಂತಿಮ ರೂಪುರೇಷೆಗಳನ್ನು ತಯಾರಿಸಲು ನಿರ್ಧರಿಸಲಾಯಿತು.

ಸಮಿತಿಯ ಪ್ರಮುಖರಾದ ಎಸ್.ಎನ್ ಮನ್ಮಥ, ರಾಧಾಕೃಷ್ಣ ಬೊಳ್ಳೂರು, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಾಣಾಧಿಕಾರಿ ರಾಜಣ್ಣ,ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್,ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಹರೀಶ್ ಕಂಜಿಪಿಲಿ, ಹರೀಶ್ ಬಂಟ್ವಾಳ್,ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಎನ್.ಎ.ರಾಮಚಂದ್ರ,ಸಂತೋಷ್ ಜಾಕೆ, ಚಂದ್ರಶೇಖರ ಪೇರಾಲು, ದಿನೇಶ್ ಮಡಪ್ಪಾಡಿ, ಪಿ.ಎಸ್.ಗಂಗಾಧರ
ಸಂತೋಷ್ ಕುತ್ತಮೊಟ್ಟೆ, ಸುನಿಲ್ ಕೇರ್ಪಳ, ಪ್ರವೀಣ್ ಮುಂಡೋಡಿ, ಬಾಲಕೃಷ್ಣ ಕೀಲಾಡಿ,ಡಾ.ನಿತಿನ್ ಪ್ರಭು, ಕೆ.ಟಿ.ವಿಶ್ವನಾಥ, ಕೇಶವ ಅಡ್ತಲೆ, ಕೆ.ಗೋಕುಲ್ದಾಸ್, ದಾಮೋದರ ಗೌಡ ಮದುವೆಗದ್ದೆ, ಶಂಕರ್ ಪೆರಾಜೆ, ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ವಿಜೇಶ್ ಹಿರಿಯಡ್ಕ,
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗೋಪಾಲ, ಜಿ.ಪಂ.ಇಂಜಿನಿಯರ್ ಫಯಾಝ್ ಅಹಮ್ಮದ್, ಸಿಡಿಪಿಒ ಶೈಲಜಾ ದಿನೇಶ್, ಸುಳ್ಯ ತಾಲೂಕು ಮಹಿಳಾ ಒಕ್ಕೂಟಗಳ ಅಧ್ಯಕ್ಷೆ ಪುಷ್ಪಾ ಡಿ ಪ್ರಸಾದ್ ಕಾನತ್ತೂರು, ಮಧುಮತಿ ಬೊಳ್ಳೂರು, ಚಂದ್ರಾಕ್ಷಿ ಜೆ ರೈ, ಸತ್ಯಕುಮಾರ್ ಆಡಿಂಜ, ನಂದರಾಜ ಸಂಕೇಶ, ಬಾಲಕೃಷ್ಣ ನಾಯ್ಕ್ ಅಜ್ಜಾವರ, ಕೇಶವ ಮೂರ್ತಿ ಹೆಬ್ಬಾರ್, ಪ್ರಸಾದ್ ಕಾಟೂರು,ದಿಲೀಪ್ ಬಾಬ್ಲುಬೆಟ್ಟು, ಪವನ್ ಪಲ್ಲತ್ತಡ್ಕ,ಲೋಹಿತ್ ಬಾಲಿಕಳ,ಮುರಳಿ ನಳಿಯಾರು,ವೀರಪ್ಪ ಗೌಡ ಕಣ್ಕಲ್, ದೀಪಕ್ ಕುತ್ತಮೊಟ್ಟೆ, ರಜತ್ ಅಡ್ಕಾರ್, ಪ್ರವೀಣ್ ಎಸ್ ರಾವ್, ಶೇಖರ ಮಡ್ತಿಲ, ಅನಂತಕೃಷ್ಣ ಖಂಡಿಗೆಮೂಲೆ, ಜಯಪ್ರಕಾಶ್ ನೆಕ್ರಪ್ಪಾಡಿ, ಮಂಜುನಾಥ್ ಮಡ್ತಿಲ, ರವಿನಾಥ್ ಮಡ್ತಿಲ, ಶ್ವೇತ, ಮಹೇಶ ಜಬಳೆ, ವಿವಿಧ
ಇಲಾಖಾಧಿಕಾರಿಗಳು, ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಇದ್ದರು.







