ಅಹಮದಾಬಾದ್: ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ದಕ್ಷಿಣ ಆಫ್ರಿಕಾ 9 ವಿಕೆಟ್ಗಳಿಂದ ಸೋಲಿಸಿತು.ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡು
ವಿಂಡೀಸ್ ಅನ್ನು ನಿಗದಿತ 20 ಓವರ್ನಲ್ಲಿ 176 ರನ್ಗಳಿಗೆ ಕಟ್ಟಿಹಾಕಿತು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16.1 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 177 ರನ್ ಗಳಿಸಲಿ ಭರ್ಜರಿ ಗೆಲುವು ದಾಖಲಿಸಿತು. ದಕ್ಷಿಣ ಆಫ್ರಿಕಾ ಪರ ನಾಯಕ ಆಡಂ ಮರ್ಕರಮ್ ಅಜೇಯ 82 ರನ್ ಗಳಿಸಿದರೆ, ಕ್ವಿಂಟನ್ ಡಿಕಾಕ್ 47 ಹಾಗೂ ರಯಾನ್ ರಿಕಲ್ಟನ್ ಅಜೇಯ 47 ರನ್ ಗಳಿಸಿದರು. ಇದಕ್ಕೂ ಮುನ್ನ 87 ರನ್ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿಂಡೀಸ್ಗೆ ಜೇಸನ್ ಹೋಳ್ಡರ್ ಹಾಗೂ ರೊಮಾರಿಯೋ ಶೆಫರ್ಡ್ (52) ಆಸರೆಯಾದರು. ಜಯದ ಮೂಲಕ ದಕ್ಷಿಣ ಆಫ್ರಿಕಾ ಸೆಮಿ ಫೈನಲ್ಗೆ ಮುನ್ನಡೆಯಿತು.
ಈ ಫಲಿಂತಾಂಶದ ಮೂಲಕ ಭಾರತದ ಸೆಮಿಫೈನಲ್ ಹಾದಿ ಸುಗಮವಾದಂತಾಗಿದೆ. ಇನ್ನುಳಿದ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ಪ್ರವೇಶಿಸಬಹುದು.










