ಸುಳ್ಯ: ಸಕಾರಾತ್ಮಕ ದಾರಿಯಲ್ಲಿ, ಸಕಾರಾತ್ಮಕ ಕಾರ್ಯದಲ್ಲಿ ತೊಡಗಿಕೊಂಡರೆ ಮತ್ತು ಕರ್ಮ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದರೆ ಮನುಷ್ಯ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಹೇಳಿದ್ದಾರೆ.
ಸುಳ್ಯ ಕಾಯರ್ತೋಡಿ ವಿಷ್ಣು ನಗರದ ಸೂರ್ತಿಲ ಶ್ರೀ ರಕ್ತೇಶ್ಚರಿ ಕ್ಷೇತ್ರದ ಬ್ರಹ್ಮಕಲಶ ಮತ್ತು ನೇಮೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ
ಅವರು ಆಶೀರ್ವಚನ ನೀಡಿದರು. ಧರ್ಮ ಜಾಗೃತಿಗೆ ಪ್ರತಿಯೊಬ್ಬರೂ ಪ್ರಯತ್ನ ನಡೆಸಬೇಕು ಎಂದ ಅವರು ಪ್ರತಿ ಮನೆ ಹಾಗೂ ಕ್ಷೇತ್ರಗಳಲ್ಲಿ ಭಜನೆ ಮಾಡಬೇಕು. ಭಜನೆಯಿಂದ ವಿಭಜನೆ ತಪ್ಪುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪರಿಸರ ತಜ್ಞ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಮಾತನಾಡಿ’ ಪ್ರಕೃತಿಯೇ ದೇವರು,ಪ್ರಕೃತಿಯೇ ಗುರು. ಪ್ರಕೃತಿಯ ಆರಾಧನೆಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು. ಅನ್ಯಾಯ, ಅಧರ್ಮವನ್ನು ದೇವರು ಮತ್ತು ಪ್ರಕೃತಿ ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಲೀಲಾಧರ ಡಿ.ವಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಪದ್ಮಶ್ರೀ ಪುರಸ್ಕೃತರಾದ ತೂಗುಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್,
ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ನಪಂ.ಸದಸ್ಯೆ ಪ್ರವಿತಾ ಪ್ರಶಾಂತ್ ಭಾಗವಹಿಸಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ,
ಡಿ.ಎಸ್.ಗಿರೀಶ್, ಕೃಷ್ಣ ಬೆಟ್ಟ, ಉಪಸ್ಥಿತರಿದ್ದರು.
ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿ ಪಡ್ಪು ಸ್ವಾಗತಿಸಿ ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಗಣೇಶ್ ಆಳ್ವ, ವಂದಿಸಿದರು. ಬೂಡು ರಾಧಾಕೃಷ್ಣ ರೈ, ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡಿದ ಉದ್ಯಮಿ ಆರ್.ಕೆ.ನಾಯರ್, ಜಯರಾಮ ಸೂರ್ತಿಲ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.