ಸುಳ್ಯ:ಕನ್ನಡ ಮತ್ತು ಮಲೆಯಾಳ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣ ಗೊಳ್ಳುತ್ತಿರುವ “ಜಾವಾ ಕಾಫಿ” ಎಂಬ ಸಿನೆಮಾದ ಅಂತಿಮ ಹಂತದ ಚಿತ್ರೀಕರಣ ಸುಳ್ಯದ ಸ್ನೇಹ ಶಾಲೆಯಲ್ಲಿ ನಡೆಯಿತು. ಆದ್ರಿ ಸ್ಟಾರ್ ಫಿಲಂಸ್ ನಿರ್ಮಾಣದ ಈ ಚಿತ್ರವನ್ನು ಸ್ವತ: ನಾಯಕಿ ಪಾತ್ರ ನಿರ್ವಹಿಸುತ್ತಿರುವ
ಸಾನ್ವಿಕಾ ನಿರ್ದೇಶಿಸುತ್ತಿದ್ದಾರೆ. ನಾಯಕನಾಗಿ ಅಜಯ್ ವರ್ಧನ್ ಪಾತ್ರ ನಿರ್ವಹಿಸುತ್ತಿದ್ದು, ಹಾಸನದ ಆರ್ಯ ರವರು ಸಹಾಯಕ ನಿರ್ದೇಶಕರಾಗಿದ್ದಾರೆ. ಈಗಾಗಲೇ ವಯನಾಡ್, ಮಡಿಕೇರಿ, ಮಂಗಳೂರು ಮತ್ತು ಸಮುದ್ರತೀರದಲ್ಲಿ ಬಹುಪಾಲು ಚಿತ್ರೀಕರಣ ಮುಗಿದಿದೆ. ಶುಕ್ರವಾರ ಮತ್ತು ಶನಿವಾರ ಸ್ನೇಹ ಶಿಕ್ಷಣ ಸಂಸ್ಥೆಯ ಪರಿಸರದಲ್ಲಿ ಚಿತ್ರೀಕರಣ ನಡೆಸಲಾಯಿತು.